ಕನ್ನಡದ ಅಪ್ಪು ದೊಡ್ಮನೆ ಪುನೀತ್ ರಾಜ್ ಕುಮಾರ ಯಾರ್ಯಾರಿಗೆ ಪ್ರೇರಣೆ ಗೊತ್ತೆ?
ಅನೇಕರು ಪುನೀತ್ ರಾಜ್ ಕುಮಾರ ಮತ್ತು ದೊಡ್ಮನೆಯ ದೊಡ್ಡ ಗುಣದ ಬಗ್ಗೆ ಪ್ರಶಂಸೆಯ ಮಾತನಾಡುತ್ತಾರೆ. ಕೆಲವರು ಅವರ ಸ್ಫೂರ್ತಿಯಿಂದ ವಿದಾಯಕ ಕೆಲಸ ಮಾಡಿದವರಿದ್ದಾರೆ. ಅಂಥವರಲ್ಲಿ ಸಿದ್ಧಾಪುರದ ಶಿಕ್ಷಕ ಅಂತರಾಷ್ಟ್ರೀಯ ಈಜುಪಟು ಶಾಮಸುಂದರ್ ಒಬ್ಬರು. ವೃತ್ತಿಯಿಂದ ಶಿಕ್ಷಕ, ಪ್ರವೃತ್ತಿಯಿಂದ ಈಜುಪಟುವಾಗಿರುವ ಶ್ಯಾಮಸುಂದರ್ ತನ್ನ ಆರೋಗ್ಯದ ಕಾರಣಕ್ಕೆ ಪ್ರಾರಂಭಿಸಿದ ಈಜು ಅವರನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದೆ.
ಕಳೆದ ಹತ್ತು ವರ್ಷಗಳಿಂದ ಈಜುಗಾರ, ಈಜು ತರಬೇತಿ ದಾರರಾಗಿ ಶ್ರಮಿಸುತ್ತಿರುವ ಶಿಕ್ಷಕ ಶ್ಯಾಮಸುಂದರ್ ಮೂಲತ: ಶಿವಮೊಗ್ಗದ ಶಿಕಾರಿಪುರದವರು. ಈಜು, ತರಬೇತಿ, ಈಜಿನ ಸ್ಫರ್ಧೆ ಎಂದುಕೊಂಡು ಹೆಸರು ಮಾಡುತ್ತಿರುವ ಶ್ಯಾಮಸುಂದರ್ ಸಿದ್ಧಾಪುರದ ಹೊಸೂರಿನ ಪುಟ್ಟಪ್ಪನ ಕೆರೆಯ ಸ್ವಚ್ಛತೆ ಮಾಡುತ್ತಾ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಶಿಕ್ಷಕ ವೃತ್ತಿ- ಈಜು ಎಂದುಕೊಂಡಿದ್ದ ನನಗೆ ಪುನೀತ್ ರಾಜ್ ಕುಮಾರ್ ಸಾಮಾಜಿಕ ಸೇವೆಯ ಸ್ಫೂರ್ತಿಯಿಂದ ಹೊಸೂರಿನ ಕೆರೆಯ ಸ್ವಚ್ಛತೆಯ ಕಾಳಜಿ ಬಂತು ಎನ್ನುತ್ತಾರೆ. ಕೆಲವು ವರ್ಷಗಳಿಂದ ಪುಟ್ಟಪ್ಪನ ಕೆರೆ ಸ್ವಚ್ಛತೆಗೆ ಶ್ರಮಿಸುತ್ತಿರುವ ಶ್ಯಾಮ್ ಸುಂದರ್ರಿಂದಾಗಿ ಈ ಕೆರೆ ಸ್ವಚ್ಛವಾಗಿ ನಳನಳಿಸುತ್ತಿದೆ. ಇದಕ್ಕೆ ಸ್ಥಳೀಯ ಪ.ಪಂ. ಸೇರಿದಂತೆ ಸ್ಥಳೀಯರ ಪ ಪ್ರೋತ್ಸಾಹ, ಉತ್ತೇಜನ ಕಾರಣ ಎನ್ನುತ್ತಾರೆ. ಅಂದಹಾಗೆ ಸಿದ್ದಾಪುರದ ಇಳ್ಳಿಮನೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿರುವ ಇವರು ಈ ವರೆಗೆ ರಾಜ್ಯ, ರಾಷ್ಟೃ, ಅಂತರಾಷ್ಟ್ರೀಯ ಮಟ್ಟದ ನೂರಾರು ಪದಕಗಳನ್ನು ಮುಡಿಗೇರಿಸಿಕೊಂಡರುವ ಈಜುಪಟು!