ಜಿಂಕೆ ಬೇಟೆಯಾಡಿ ಕೊಂದ ಅರೋಪದ ಮೇಲೆ ಅರಣ್ಯ ಇಲಾಖೆಯವರು ಯಲ್ಲಾಪುರ ತಾಲೂಕಿನ ಮದನೂರು ಗ್ರಾಮದ ಹುಲಗೋಡಿನ ರಮೇಶ ನಾಗೇಶ ಗಾಂವ್ಕರ ಎಂಬಾತನನ್ನು ಬಂಧಿಸಿ ಆತನಿಂದ ಮನೆಯಲ್ಲಿಟ್ಟಿಧ್ಸ ಜಿಂಕೆ ಕಾಲು,ತಲೆ,ಚರ್ಮ,33 ಕೆ.ಜಿ ಮಾಂಸ ಹಾಗು ಮಾಂಸ ತಯಾರಿಸಲು ಬಳಸಿದ ಕತ್ತಿಯನ್ನು ವಶಪಡಿಸಿಕೊಂಡಿದ್ದಾರೆ.
.
ಈ ಕೃತ್ಯಯಲ್ಲಿ ಭಾಗಿಯಾದ ಇನ್ನಿತರ ಆರೋಪಿಗಳನ್ನು ಬಂಧಿಸಲು ಅರಣ್ಯ ಇಲಾಖೆಯವರು ಬಲೆ ಬಿಸಿದ್ದಾರೆ.ಯಲ್ಲಾಪುರ ಉಪ ಸಂರಕ್ಷಣಾಧಿಕಾರಿಗಳಾದ ಹರ್ಷ ಬಾನು ಹಾಗು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಚರಣೆಯಲ್ಲಿ ವಲಯ ಅರಣ್ಯ ಅಧಿಕಾರಿಗಳೊಂದಿಗೆ ಉಪ ವಲಯ ಅರಣ್ಯಾಧಿಕಾರಿಗಳಾದ ಆನಂದ,ವಿನಯ,ಮಂಜುನಾಥ,ಪ್ರಕಾಶ,ಕಿರಣಕುಮಾರ ಹಾಗು ಎಲ್ಲಾ ವಲಯದ ಗಸ್ತು ವನಪಾಲಕರು ಪಾಲ್ಗೊಂಡಿದ್ದರು.
ಬಾವಿಗೆ ಬಿದ್ದು ಮೃತಪಟ್ಟ ಚಿರತೆ!………. ಶಿ ರ್ಸಿ ತಾಲೂಕಿನ ಜಾನ್ಮನೆ ವಲಯದ ಸಿದ್ಧಾಪುರ ಹೆಗ್ನೂರ್ ಗ್ರಾಮದ ಬೆಟ್ಟದಲ್ಲಿ ಚಿರತೆಯೊದು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿದೆ. ಒಂದು ವರ್ಷದ ಹೆಣ್ಣು ಚರತೆ ಇದಾಗಿದೆ.ಈ ಬಗ್ಗೆ ಚಿರತೆ ಶವದ ಸ್ಯಾಂಪಲ್ ಪ್ರಯೋಗಾಲಯಕ್ಕೆ ಕಳಿಸಿ ಚಿರತೆಯ ಸಾವಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಘಟನಾ ಸ್ಥಳಕ್ಕೆ ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ. ಅಜ್ಜಯ್ಯ ಜಿ ಆರ್, ಜಾನ್ಮನೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸಿಎನ್ ಹರೀಶ್, ಜಾನ್ಮನೆ ವಲಯ ಅರಣ್ಯಾಧಿಕಾರಿಗಳಾದ ಶಿವಾನಂದ ಎಸ್ ನಿಂಗಾಣಿ,ಹೆರೂರ್ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಮುತ್ತಣ್ಣ ಹಂದ್ರಾಳ ಹಾಗು ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.