


ಶಿರಸಿ ಪೊಲೀಸ್ರಿಂದ ಕಾರ್ಯಚರಣೆ. ಎಟಿಎಂ ನಿಂದ ಹಣ ತೆಗೆಯಲು ಮುಗ್ದ ಹೆಣ್ಣು ಮಕ್ಕಳಿಗೆ ನೆರವಾಗುವ ನಾಟಕಮಾಡಿ ಅವರ ಎಟಿಎಂ ನಿಂದಲೇ ಹಣ ತೆಗೆದು ಪರಾರಿಯಾಗುತ್ತಿದ್ದ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ತಾಲೂಕಿನ ಕೌಸರ ಬಾನು ನಜೀರ ಸಾಬ ಇಸ್ರಾರ ಅಹಮ್ಮದ ಬಂಮಕಾಪುರ ಎಂಬುವವಳನ್ನು ಶಿರಸಿ ಪೋಲಿಸರು ಬಂಧಿಸಿ ಅವಳು ಯಮಾರಿಸಿದ್ದ 30 ಎಟಿಎಂ ಕಾರ್ಡಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಡಿವಾಯೆಸ್ಪಿ ಗಣೇಶ ಕೆ ಎಲ್ ರ ಸಮರ್ಥವಾದ ಮಾರ್ಗದರ್ಶನ ಸಿಪಿಆಯ್ ಸೀತಾರಾಮ ನೇತೃತ್ವ ದಲ್ಲಿ ನಡೆದ ಕಾರ್ಯಚರಣೆಯಲ್ಲಿ ಪಿಎಸ್ಆಯ್ ಗಳಾದ ರಾಜಕುಮಾರ ಉಕ್ಕಲಿ,ಕು.ರತ್ನಾಕುರಿ ಹಾಗು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಸಾಲ ತೀರಿಸಲಾಗದೇ ಸಾವನಪ್ಪಿದ ಯುವಕ!
ಶಿರಸಿ: ಬಿಸಲಕೊಪ್ಪ ಕುತ್ಬುದ್ಧೀನ್ ವಡಗೇರಿ ಎಂಬ 28 ವರ್ಷದ ಯುವಕ ಸಾಲ ತೀರಿಸಲಾಗದೇ ಸಾವನಪ್ಪಿದ್ದಾನೆ.
ವಡಗೇರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಈತ ವಿಪರೀತ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲಾಗುತ್ತಿಲ್ಲ ಎಂದು ನೊಂದಿದ್ದ. ಇದೇ ನೋವಿನಲ್ಲಿ ಸೆ 17ರಂದು ರಾತ್ರಿ ಈತ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಮನೆಯ ಹಿತ್ತಿಲಿನಲ್ಲಿ ಅಸ್ವಸ್ಥನಾಗಿ ಬಿದ್ದವನನ್ನು ಸ್ಥಳೀಯರು ಮಾರಿಕಾಂಬಾ ಆಸ್ಪತ್ರೆಗೆ ದಾಖಲಿಸಿದ್ದರು.
ಅಲ್ಲಿಂದ ಮುಂದೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ’ಗೆ ಸಾಗಿಸಲಾಗಿತ್ತು. ಅಲ್ಲಿಯೂ ಚಿಕಿತ್ಸೆ ಒಗ್ಗದ ಕಾರಣ ಮಂಗಳೂರಿಗೆ ಕರೆದುಕೊಂಡು ಹೋಗುವ ಪ್ರಯತ್ನ ನಡೆದಿದ್ದು, ತೀವೃ ಅಸ್ವಸ್ಥಗೊಂಡ ಹಿನ್ನಲೆ ಶಿರಸಿ ಪಂಡಿತ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಸೆ 18ರ ಮಧ್ಯಾಹ್ನ ಈತ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ.
