

ಜನಸಾಮಾನ್ಯರ ಕೆಲಸ ಮಾಡುವ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳು ಸೋಮುವಾರದಿಂದ ಆಧಾರ್ ಸೀಡ್,ಲ್ಯಾಂಡ್ ಬೀಟ್, ಬಗುರ್ ಹುಕುಂ, ಹಕ್ಕುಪತ್ರ, ಸೇರಿದಂತೆ ಕೆಲವು ಸೇವೆಗಳನ್ನು ನೀಡದಿರಲು ತೀರ್ಮಾನಿಸಿದ್ದು ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆ ಈಡೇರುವ ವರೆಗೆ ಈ ಅಸಕಾರ ಮುಂದುವರಿಯಲಿದ್ದು ಗುರುವಾರದಿಂದ ಅನಿರದಿಷ್ಠಾವಧಿ ವರೆಗೆ ಮುಷ್ಕರ ನಡೆಯಲಿದೆ. ಎಂದು ರಾಜ್ಯ ಗ್ರಾಮಾಡಳಿತ ಅಧಿಕಾರಿಗಳ ಕೇಂದ್ರ ಸಂಘದ ಸಿದ್ಧಾಪುರ ಶಾಖೆ ತಿಳಿಸಿದೆ.
ಇಂದು ಈ ಬಗ್ಗೆ ಸ್ಥಳೀಯ ತಹಸಿಲ್ಧಾರ ಕಛೇರಿಮೂಲಕ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನೀಡಿದ ಮನವಿ ಅರ್ಪಣೆ ವೇಳೆ ಮಾತನಾಡಿದ ಘಟಕದ ಪದಾಧಿಕಾರಿಗಳು ಈ ವಿಷಯ ತಿಳಿಸಿದರು.

ಮೂಲಭೂತ ಸೌಕರ್ಯಗಳು, ಆಧುನಿಕ ತಾಂತ್ರಿಕ ಸೌಲಭ್ಯಗಳನ್ನು ನೀಡದೆ ಅನೇಕ ಕೆಲಸಗಳ ಒತ್ತಡಗಳಿಂದ ಬಳಲುತ್ತಿರುವ ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆಗೆ ಸ್ಫಂದಿಸಿ ನ್ಯಾಯ ಒದಗಿಸಲು ಈ ಮನವಿಯಲ್ಲಿ ಆಗ್ರಹಿಸಲಾಗಿದೆ.
