

ಉತ್ತರ ಕನ್ನಡ ಜಿಲ್ಲೆಯ ಎರಡು ಜನ ತಹಸಿಲ್ಧಾರರು ಮತ್ತು ಇಬ್ಬರು ಗ್ರಾಮ ಆಡಳಿತಾಧಿಕಾರಿಗಳು ಸರ್ಕಾರದ ಉತ್ತಮ ಕಂದಾಯ ಅಧಿಕಾರಿಗಳಾಗಿ ಗುರುತಿಸಲ್ಪಟ್ಟಿದ್ದಾರೆ.
ಶಿರಸಿ ಮತ್ತು ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಎರಡೂ ತಾಲೂಕುಗಳ ತಹಸಿಲ್ಧಾರರಾದ ಶ್ರೀಧರ ಮಂದಲಮನಿ (ಶಿರಸಿ) ಮತ್ತು ಎಂ.ಆರ್. ಕುಲಕರ್ಣಿ (ಸಿದ್ಧಾಪುರ) ಈ ಗೌರವಕ್ಕೆ ಪಾತ್ರರಾದ ಅಧಿಕಾರಿಗಳು. ಇವರೊಂದಿಗೆ ಹಳಿಯಾಳದ ಇಬ್ಬರು ಗ್ರಾಮ ಆಡಳಿತಾಧಿಕಾರಿಗಳು ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಎಲ್ಲಾ ಕೆಲಸಗಳನ್ನೂ ಆನ್ಲೈನ್ ಮಾಡಿರುವ ಸರ್ಕಾರ ಗ್ರಾಮ ಆಡಳಿತಾಧಿಕಾರಿಗಳ ಮಟ್ಟದಿಂದ ಜಿಲ್ಲಾಧಿಕಾರಿಗಳ ವರೆಗಿನ ಅಧಿಕಾರಿಗಳಿಗೆ ಅವರ ಕೆಲಸದ ದಕ್ಷತೆ, ಪ್ರಮಾಣ, ಗುಣಮಟ್ಟ ಸೇರಿದಂತೆ ದಿನಿತ್ಯದ ಕೆಲಸಗಳ ಪ್ರಗತಿ ಆಧರಿಸಿ ಈ ಗೌರವ ನೀಡುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕ್ಷೇತ್ರದ ಇಬ್ಬರು ತಹಸಿಲ್ದಾರರು, ಹಳಿಯಾಳ ಕ್ಷೇತ್ರದ ಇಬ್ಬರು ಗ್ರಾಮ ಲೆಕ್ಕಿಗರು ಈ ಗೌರವಕ್ಕೆ ಪಾತ್ರರಾಗಿರುವುದಕ್ಕೆ ಸಿದ್ಧಾಪುರ ಗ್ರಾಮ ಆಡಳಿತಾಧಿಕಾರಿಗಳ ಸಂಘ ಅಭಿನಂದಿಸಿದೆ.
