


ಡಿಸೆಂಬರ್ ನಲ್ಲಿ ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇದೇ ತಿಂಗಳು ಹೊರಟ ಕನ್ನಡ ಜ್ಯೋತಿ ರಥಯಾತ್ರೆ ಸಿದ್ಧಾಪುರದ ಭುವನಗಿರಿಯಿಂದ ಹೊರಟು ಜಿಲ್ಲೆ ಸಂಚರಿಸಿ ಹಾವೇರಿ ಜಿಲ್ಲೆ ಪ್ರವೇಶಿಸಿದೆ.
ಈ ಕನ್ನಡ ಜ್ಯೋತಿ ರಥ ಕಲ್ಪನೆ ಜಾರಿಯಾಗಿ ಎರಡನೇ ವರ್ಷ. ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕೆ ನೆರವಾಗುವ ಈ ಜ್ಯೋತಿ ರಥ ಸಿದ್ಧಾಪುರದ ಮೂಕಾಂಬಿಕೆ ದೇವಸ್ಥಾನ ಭುವನಗಿರಿಯಿಂದ ಹೊರಡಬೇಕೆಂಬ ಯೋಜನೆಗೂ ಸಿದ್ಧಾಪುರದ ಭುವನಗಿರಿಯನ್ನು ಭುವನೇಶ್ವರಿ ದೇವಾಲಯ ಎನ್ನುವುದಕ್ಕೂ ಎತ್ತಣಿಂದ ಎತ್ತಣ ಸಂಬಂಧ! ಯಾರಿಗೂ ತಿಳಿದಿಲ್ಲ. ಆದರೆ ರವಿವಾರ ಪ್ರಾರಂಭವಾದ ಕನ್ನಡಜ್ಯೋತಿ ರಥ ಉದ್ಘಾಟನೆ ಅಥವಾ ಚಾಲನೆ ಕಾರ್ಯಕ್ರಮದಲ್ಲಿ ನಾಡೋಜ ಮಹೇಶ್ ಜೋಷಿ ಬಿಟ್ಟರೆ ಮತ್ತ್ಯಾರೂ ಬ್ರಾಹ್ಣಣರು ವೇದಿಕೆ ಮೇಲೆ ಇಲ್ಲದಿದ್ದುದು ಕೆಲವರ ಆಕ್ಷೇಪಕ್ಕೆ ಕಾರಣ ಎನ್ನುವ ಚರ್ಚೆ ನಡೆಯುತ್ತಿದೆ.
ಕನ್ನಡ ಸಾಹಿತ್ಯವಿರಲಿ ಸಾಂಸ್ಕೃತಿಕ ಇತರೆ ಯಾವುದೇ ಚಟುವಟಿಕೆ,ಸಮಾಂಭಗಳಿರಲಿ ಅಲ್ಲಿ ಮೂಲನಿವಾಸಿಗಳು, ಬಹುಸಂಖ್ಯಾತರು, ಅರ್ಹರು, ಯೋಗ್ಯರು ಎನ್ನುವ ಪ್ರಶ್ನೆ ಬರುವುದೇ ಇಲ್ಲ. ಸರ್ಕಾರದ ನೆರವು ಪಡೆಯುವ ಹಲವು ಕಾರ್ಯಕ್ರಮಗಳಲ್ಲಿ ವಿಜೃಂಭಿಸುವ ಏಕಜಾತಿಯ ಜನರು ಸಾಹಿತ್ಯ ಪರಿಷತ್ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಪ್ರಾತಿನಿಧ್ಯ ಕೇಳುವುದು ಅವರ ಸಂಕುಚಿತತೆಯ ಪ್ರತಿಬಿಂಬವಷ್ಟೇ.
ಕನ್ನಡ ಸಾಹಿತ್ಯ,ಸಾಂಸ್ಕೃತಿಕ, ಸಹಕಾರಿ ಇತರೇ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳಲ್ಲಿ ಎಲ್ಲೂ ಕಾಣಸಿಗದ ಸಾಮಾಜಿಕ ನ್ಯಾಯ ಸಾಹಿತ್ಯ ಪರಿಷತ್ ಗೆ ಮಾತ್ರ ಅನ್ವಯಿಸುವುದು ಇಲ್ಲಿಯ ಸಾಸ್ಕೃತಿಕ ವಿಕೃತಿಯ ಪ್ರತೀಕ. ಯಾರೂ ಎನೇ ತಕರಾರೆತ್ತಿದರೂ ಕನ್ನಡರಥ ಸಾಗುತ್ತಿರುವುದು ಸಾಗಲೇಬೇಕಿರುವುದು ಕ.ಸಾ.ಪ., ಕನ್ನಡ ಸಾರಸ್ವತ ಲೋಕದ ಹಿರಿಮೆ.
