


ಸಿದ್ದಾಪುರ
ಮನುಷ್ಯ ಜೀವನಕ್ಕೆ ಸದಭಿರುಚಿಯ ಕಲೆ ನೆಮ್ಮದಿಯನ್ನು, ಒಳಿತನ್ನು ಒದಗಿಸುತ್ತದೆ. ಅಂಥ ಕಲೆಗಳಿಗೆ ಜನತೆಯ ಪ್ರೋತ್ಸಾಹ ಅಗತ್ಯ ಎಂದು ಶಿರಸಿಯ ತೋಟಗಾರ್ಸ ಸೊಸೈಟಿ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಹೇಳಿದರು.
ಅವರು ರಂಗ ಸೌಗಂಧ ರಂಗತಡ ತಾಲೂಕಿನ ವಾಜಗದ್ದೆಯ ಶ್ರೀ ದುರ್ಗಾವಿನಾಯಕ ದೇವಾಲಯ ಹಾಗೂ ಶ್ರೀ ದುರ್ಗಾವಿನಾಯಕ ಕೃಷಿಕ ಯುವಕಸಂಘದ ಸಹಯೋಗದಲ್ಲಿ ಕಂದಗಲ್ ಹನುಮಂತರಾಯ ರಚನೆಯ,ಗಣಪತಿಹೆಗಡೆ ಹುಲಿಮನೆ ನಿರ್ದೇಶನದ ರಕ್ತರಾತ್ರಿ ಪೌರಾಣಿಕ ನಾಟಕಪ್ರದರ್ಶನ ಉದ್ಘಾಟಿಸಿ ಮಾತನಾಡಿ ಹಿರಿಯರು ಉತ್ತಮ ಅಭಿರುಚಿಯ ಕಲೆಗಳ ಕುರಿತು ಅರಿವು ಮೂಡಿಸಿದಾಗ ಕಿರಿಯರ ಬದುಕು ಉತ್ತಮವಾಗಲು ಸಾಧ್ಯ. ರಂಗಸೌಗಂಧ ತಂಡ ಅತ್ಯಂತ ಶ್ರಮಪಟ್ಟು ಪ್ರತಿವರ್ಷವೂ ಅತ್ಯುತ್ತಮ ನಾಟಕಗಳನ್ನು ಪ್ರದರ್ಶಿಸುತ್ತ ಕಲೆಯ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದೆ. ರಾಜ್ಯದಾದ್ಯಂತ ಪ್ರದರ್ಶನಗಳನ್ನು ನೀಡುತ್ತಿದೆ. ಪ್ರಸಿದ್ಧ ರಂಗಕರ್ಮಿ ಸೀತಾರಾಮ ಶಾಸ್ತಿçಯವರ ನಾಟಕಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದೆ. ರಂಗಸೌಗಂಧ ತಂಡಕ್ಕೆ ಸಹಕಾರ ನೀಡುವದು ನಮ್ಮೆಲ್ಲರ ಕರ್ತವ್ಯ ಎಂದರು.

ಮುಖ್ಯ ಅತಿಥಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ ಮಾತನಾಡಿ ಕಲೆ ಕೇವಲ ರಂಜನೆಗೆ ಸೀಮಿತವಾಗಿಲ್ಲ. ಅದರ ಜವಾಬ್ದಾರಿ ಸಮಾಜಕ್ಕೆ ಮಾರ್ಗದರ್ಶಿಯಾಗುವದು ಕೂಡ. ನಮ್ಮ ಪರಂಪರೆಯ ಮೌಲ್ಯಗಳನ್ನು ಇಂದಿನ ಮತ್ತು ಮುಂದಿನ ತಲೆಮಾರಿಗೆ ದಾಟಿಸುವ ಶಕ್ತಿ ಅದಕ್ಕಿದೆ. ತಾಳಮದ್ದಳೆ,ಯಕ್ಷಗಾನದಂಥ ಕಲೆಗಳು ಪುರಾಣ ಪಾತ್ರಗಳ ಮೂಲಕ ಒಳಿತು ಮತ್ತು ಕೆಡುಕು ಯಾವುದು ಎನ್ನುವದನ್ನು ನಿರೂಪಿಸುತ್ತಿವೆ. ರಂಗಸೌಗಂಧ ತಂಡ ಈ ಹಿಂದೆಯೂ ಅನೇಕ ಪೌರಾಣಿಕ ನಾಟಕಗಳನ್ನು ಪ್ರದರ್ಶಿಸಿದ್ದು ರಕ್ತರಾತ್ರಿ ನಾಟಕ ಕೂಡ ಅಂಥ ವಿವೇಚನೆನೀಡುವ ನಾಟಕ. ಇಂಥ ಪುರಾತನ ಮೌಲ್ಯಗಳನ್ನು ಪ್ರಸಕ್ತ ಸಂದರ್ಭದಲ್ಲಿ ಪ್ರಸ್ತುತಪಡಿಸುವ ನಾಟಕಗಳು ರಂಗಸೌಗಂಧದಿಂದ ಪ್ರದರ್ಶನಗೊಳ್ಳಲಿ ಎಂದರು.
(ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ ವಾಲಿಬಾಲ್ ಪಂದ್ಯಾವಳಿಯ ಆಮಂತ್ರಣ ಪತ್ರಿಕೆಯನ್ನು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಬಿಡುಗಡೆ ಮಾಡಿದರು.)


ಇನ್ನೊರ್ವ ಮುಖ್ಯ ಅತಿಥಿ ಶ್ರೀ ದುರ್ಗಾವಿನಾಯಕ ದೇವಾಲಯದ ಅಧ್ಯಕ್ಷ ಎಸ್.ಎಂ.ಹೆಗಡೆ ರಂಗಸೌಗAಧ ತಂಡದಿAದ ಹೆಚ್ಚಿನ ಕಲಾಸೇವೆ ನಡೆಯಲಿ ಎಂದರು. ಈ ಸಂದರ್ಭದಲ್ಲಿ ಸರಸ್ವತಿ ಕಲಾಟ್ರಸ್ಟ ವತಿಯಿಂದ ಪಿ.ವಿ.ಹೆಗಡೆ ಹೊಸಗದ್ದೆ ಗಣಪತಿ ಹೆಗಡೆ ಹುಲಿಮನೆಯವರನ್ನು ಸನ್ಮಾನಿಸಿದರು. ರಂಗಸೌಗAಧ ತಂಡದ ಮುಖ್ಯಸ್ಥ ಗಣಪತಿ ಹೆಗಡೆ ಹುಲಿಮನೆ ಸ್ವಾಗತಿಸಿದರು. ರಾಜಾರಾಮ ಭಟ್ಟ ಹೆಗ್ಗಾರಳ್ಳಿ ನಿರೂಪಿಸಿ ವಂದಿಸಿದರು.
https://samajamukhhttps://samajamukhi.net/2024/09/06/teachers-day-special-sdp-nk/i.net/2024/09/06/teachers-day-special-sdp-nk/
ರಕ್ತರಾತ್ರಿ ನಾಟಕಕ್ಕೆ ಸಂಗೀತ ನಿರ್ದೇಶನ ರಾಜೇಂದ್ರ ಹೆಗಡೆ ಕೊಳಗಿ,ವಿನ್ಯಾಸ ಶ್ರೀಪಾದ ಹೆಗಡೆ ಕೋಡನಮನೆ, ವಾದ್ಯಗಳ ಸಹಕಾರ ಜಯರಾಮಭಟ್ಟ ಹೆಗ್ಗಾರಳ್ಳಿ,ಶಶಿಭೂಷಣ ಹೆಗಡೆ ತಂಗರ‍್ಮನೆ,ಈಶ್ವರ ಶಾಸ್ತಿç,ಸಂಜಯ ಭಟ್ಟ ಬಿಳಗಿ, ಧ್ವನಿ ಮತ್ತು ಬೆಳಕು ಉದಯ ಸೌಂಡ್ಸ ಶಿರಸಿ ಒದಗಿಸಿದ್ದು ಪಾತ್ರಧಾರಿಗಳಾಗಿ ಗಣಪತಿ ಹೆಗಡೆ ಗುಂಜಗೋಡ,ಶ್ರೀಪಾದ ಹೆಗಡೆ ಕೋಡನಮನೆ, ನಾಗಪತಿ ಭಟ್ಟ ವಡ್ಡಿನಗದ್ದೆ,ಪೂರ್ಣಚಂದ್ರ ಹೆಗಡೆ ಹುಲಿಮನೆ,ಶಮಂತ ಹೆಗಡೆ ಶಿರಳಗಿ,ರಾಮ ಅಂಕೋಲೆಕರ,ರಮೇಶಭಟ್ಟ ಲಕ್ಕಿಜಡ್ಡಿ,ಅಜಿತ್ ಭಟ್ ಹೆಗ್ಗಾರಳ್ಳಿ,ಶುಭಾರಮೇಶ ಲಕ್ಕಿಜಡ್ಡಿ,ಪ್ರವೀಣಾ ಹೆಗಡೆ ಗುಂಜಗೋಡ,ಜಯಶ್ರೀ ಹೆಗಡೆ ಹುಲಿಮನೆ ಅಭಿನಯಿಸಿದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






