ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦ ಸಾವಿರ ದಂಡ ಹಾಗೂ ಸತ್ರಸ್ಥೆಗೆ ೫೦ ಸಾವಿರ ಪರಿಹಾರ ನೀಡಲು ಆದೇಶ ಮಾಡಿದೆ.
ಮೂರು ವರ್ಷಗಳ ಕೆಳಗೆ ಹಲಗೇರಿಯ ಅಪ್ರಾಪ್ತ ಬುದ್ಧಿಮಾಂದ್ಯ ಮಗುವನ್ನು ಚಾಕಲೆಟ್ ಆಮಿಷವೊಡ್ಡಿ ಕರೆದೊಯ್ದಿದ್ದ ವೀರಭದ್ರ ನಾಯ್ಕ ರೇಪ್ ಮಾಡಿದ ಬಗ್ಗೆ ಆರೋಪಿಸಲಾಗಿತ್ತು ಈ ಪ್ರಕರಣದ ಕೂಲಂಕುಶ ವಿಚಾರಣೆ ನಡೆಸಿದ ನ್ಯಾಯಾಧೀಶ ಕಿರಣ ಕಿಣಿ ಆರೋಪಿಯನ್ನು ಅಪರಾಧಿ ಎಂದು ತೀರ್ಮಾನಿಸಿ ಅಪರಾಧಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ೩೦ ಸಾವಿರ ರೂಪಾಯಿಗಳ ದಂಡ ಹಾಗೂ ಸಂತ್ರಸ್ಥೆಗೆ ೫೦ ಸಾವಿರ ಪರಿಹಾರ ಘೋಶಿಸಿ ತೀರ್ಪು ನೀಡಿದ್ದಾರೆ.
ಈ ಪ್ರಕರಣದ ತನಿಖೆ ನಡೆಸಿದ ತಂಡದ ನೇತೃತ್ವವನ್ನು ಸಿ.ಪಿ.ಆಯ್. ಎನ್. ಮಹೇಶ್ ವಹಿಸಿದ್ದರು.