ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ತಿಳಿಸಿದರು. ಸಿದ್ಧಾಪುರ ನಗರದ ಬಾಲಿಕೊಪ್ಪ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಿದ್ಧಾಪುರ ಶಾಖೆ ಆಯೋಜಿಸಿದ್ದ ಗಾಂಧಿ ಪ್ರಣೀತ ಸಪ್ತ ಪಾತಕಗಳು ವಿಷಯದ ಮೇಲೆ ಉಪನ್ಯಾಸ ನೀಡಿದ ಅವರು ಸಾರ್ವಜನಿಕ ಜೀವನ, ಸಾಮಾಜಿಕಸುಧಾರಣೆ ಈ ವಿಷಯಗಳ ಬಗ್ಗೆ ವಿದ್ವತ್ತು ಹೊಂದಿದ್ದ ಗಾಂಧೀಜಿ ಸಾರ್ವಜನಿಕ, ಸಾಮಾಜಿಕ ಜೀವನದ ಅಪಸವ್ಯಗಳಿಗೆ ಪರಿಹಾರ ಸೂಚಿಸಿದ್ದನ್ನೇ ಸಪ್ತಪಾತಕಗಳ ದಾಟುವಿಕೆಯ ಪ್ರಕ್ರೀಯೆ ಎನ್ನಬಹುದು ಎಂದು ಮಾರ್ಮಿಕವಾಗಿ ಉದಾಹರಣೆಗಳೊಂದಿಗೆ ವಿವರಿಸಿದರು.
https://www.youtube.com/@samaajamukhi3721
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪತ್ರಕರ್ತ ಕನ್ನೇಶ್ವರ ಕೋಲಶಿರ್ಸಿ ಮಾತನಾಡಿ ಗಾಂಧೀಜಿ ಮತ್ತು ಅಂಬೇಡ್ಕರ್ ಹೆಚ್ಚಿನ ಟೀಕೆ, ವಿಮರ್ಶೆಗಳಿಗೆ ಗುರಿಯಾಗಿದ್ದಾರೆ, ಆದರೆ ಎಲ್ಲಾ ಟೀಕೆ,ವಿಮರ್ಶೆ,ಅಪವಾದಗಳನ್ನು ಮೀರಿ ಸದಾ ಪ್ರಸ್ತುತರಾಗುತಿದ್ದವರೂ ಅವರೇ, ಅವರ ವ್ಯಕ್ತಿತ್ವ, ತತ್ವಗಳು ಪೌರಾತ್ಯ, ಪಾಶ್ಚಿಮಾತ್ಯರಿಗೆ ಅರ್ಥವಾದಷ್ಟು ಭಾರತೀಯರಿಗೆ ಎದೆಗೆ ಇಳಿಯದಿರುವುದು ಇಲ್ಲಿಯ ಮಿತಿಯೆ? ಎಂದು ಪ್ರಶ್ನಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ಹೆಗಡೆ, ತೀರ್ಥಳ್ಳಿ ಟೀಚರ್ಸ್ ಕೋ ಆಪ್ ಸೊಸೈಟಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ನೌಕರರ ಸಂಘದ ಕಾರ್ಯದರ್ಶಿ ಪರಶುರಾಮ ನಾಯ್ಕ ಮಾತನಾಡಿದರು. ಪ್ರಾ.ಶಿ.ಸಂಘದ ಕಾರ್ಯದರ್ಶಿ ಗುರುರಾಜ್ ನಾಯ್ಕ ಸ್ವಾಗತಿಸಿದರು. ನಾಗರಾಜ್ ಮಡಿವಾಳ ನಿರೂಪಿಸಿದರು.ರಾಮನಾಥ ನಾಯ್ಕ ವಂದಿಸಿದರು.