ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ ಕ್ಷ ನಾಡೋಜ ಮಹೇಶ್ ಜೋಷಿ ಸಿದ್ಧಾಪುರಕ್ಕೆ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ಇರುವುದಕ್ಕೆ ಅದರ ಮಹತ್ವ ಹೆಚ್ಚು ಎಂದು ಬಣ್ಣಿಸಿದ್ದಾರೆ.
ಎಸ್. ವಿ.ಹೆಗಡೆ ಮಗೇಗಾರ್ ಬರೆದಿರುವ ಹಾವಿನ ಹಂದರದಿಂದ ಹೂವ ತಂದವರು ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು ತಮ್ಮ ಕೃತಿಯಿಂದ ಜೀವಂತವಾಗಿರುತ್ತಾರೆ ಎಂದರು.
ಶಂಕರಮಠದಲ್ಲಿ ನಡೆದ ಈ ಕಾರ್ಯಕ್ರಮವನ್ನು ಕೆಲವು ಸಂಘಟನೆಗಳೊಂದಿಗೆ ಧರ್ಮಶ್ರೀ ಫೌಂಡೇಶನ್ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಪ್ರಾಸ್ಥಾವಿಕ ನುಡಿಗಳನ್ನಾಡಿದ ನ್ಯಾಯವಾದಿ ರವಿ ಹೆಗಡೆ ತಮ್ಮ ಕುಟುಂಬದ ಹಿನ್ನೆಲೆ ಜೊತೆಗೆ ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕುಟುಂಬದ ಕೊಡುಗೆ ಪರಿಚಯಿಸಿದರು.
ದಿವಾಕರ ಹೆಗಡೆ ಕೆರೆಹೊಂಡ ಪುಸ್ತಕ ಪರಿಚಯ ಮಾಡಿದರು. ಎಂ.ಕೆ.ನಾಯ್ಕ ಹೊಸಳ್ಳಿ ಮತ್ತು ಗಣಪತಿ ಹೆಗಡೆ ಗುಂಜಗೋಡ ನಿರೂಪಿಸಿದರು.