


ಸಿದ್ಧಾಪುರ, ಇಲ್ಲಿಯ ಐತಿಹಾಸಿಕ ನೆಹರೂ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಪ್ರಾಥಮಿಕ & ಪ್ರೌಢಶಾಲೆಗಳ ವಿಭಾಗ ಮಟ್ಟದ ವಾಲಿಬಾಲ್ ಕ್ರೀಡಾಕೂಟ ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಇದೇ ಮೊದಲಬಾರಿ ಸಿದ್ದಾಪುರ ತಾಲೂಕಿನಲ್ಲಿ ನಡೆದ ವಿಭಾಗೀಯ ಮಟ್ಟದ ಕ್ರೀಡಾಕೂಟ ಸಂಘಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ನೇತೃತ್ವದ ಶಿಕ್ಷಣ ಇಲಾಖೆಯ ಸಿಬ್ಬಂದಿಗಳ ತಂಡ ಶಾಸಕ ಭೀಮಣ್ಣ ನಾಯ್ಕ ಮೇಲ್ ಉಸ್ತುವಾರಿಯಲ್ಲಿ ಈ ಕ್ರೀಡಾ ಕೂಟ ಆಯೋಜಿಸಿತ್ತು. ಮೊದಲ ದಿನದ ಕ್ರೀಡಾಕೂಟದ ಉದ್ಘಾಟನೆ ವೇಳೆ ಸುರಿದ ಭಾರಿ ಮಳೆ ತುಸು ಅಡಚಣೆ ಉಂಟುಮಾಡಿತ್ತಾದರೂ ಮಾರನೇ ದಿನ ಮಧ್ಯಾಹ್ನದ ವೇಳೆಗೆ ಕ್ರೀಡಾಕೂಟ ಸಾಂಗವಾಗಿ ಸಂಪನ್ನವಾದಾಗ ಎಲ್ಲರ ಸಂಬ್ರಮ ಎದ್ದು ಕಾಣುತಿತ್ತು.
ಹದಿನಾಲ್ಕು ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ಶಿರಸಿ(ಪ್ರಥಮ) ಹಾವೇರಿ (ದ್ವಿತಿಯ) ಬೆಳಗಾವಿ (ತೃತೀಯ) ಸ್ಥಾನ ಗಳಿಸಿದವು.
೧೪ ವರ್ಷಗಳ ಒಳಗಿನ ಬಾಲಕಿಯರ ವಿಭಾಗದಲ್ಲಿ ಗದಗ ಹಾವೇರಿ ಬಾಗಲಕೋಟೆಗಳು ಕ್ರಮವಾಗಿ ಮೊದಲ, ಎರಡನೇ, ತೃತೀಯ ಸ್ಥಾನ ಗಳಿಸಿದವು.
೧೭ ವರ್ಷಗಳ ಒಳಗಿನ ಬಾಲಕಿಯರ ವಿಭಾಗದಲ್ಲಿ ಬೆಳಗಾವಿ, ಗದಗ, ಧಾರವಾಡ ಕ್ರಮವಾಗಿ ಪ್ರಥಮ, ದ್ವಿತಿಯ, ತೃತೀಯ ಸ್ಥಾನ ಗಳಿಸಿದರೆ ೧೭ ವರ್ಷಗಳ ಒಳಗಿನ ಬಾಲಕರ ವಿಭಾಗದ ವಾಲಿಬಾಲ್ ನಲ್ಲಿ ಚಿಕ್ಕೋಡಿ (ಪ್ರಥಮ) ಶಿರಸಿ ( ದ್ವಿತಿಯ) ಕಾರವಾರ (ತೃತೀಯ) ಸ್ಥಾನ ಗಳಿಸಿದವು.
(ಈ ವಿಭಾಗೀಯ ಮಟ್ಟದ ಕ್ರೀಡಾಕೂಟದ ಬಹುತೇಕ ಲೈವ್ ವರದಿಗಳು samajamukhinews youtube channel & samaajamukhi fb page ಗಳಲ್ಲಿ ಪ್ರಕಟವಾಗಿದ್ದು ಆಸಕ್ತರು ಅವುಗಳನ್ನು ವೀಕ್ಷಿಸಿ ಶೇರ್, ಲೈಕ್ ಮಾಡಿ subscribe ಮಾಡುವ ಮೂಲಕ ಸಹಕರಿಸಲು ವಿನಂತಿ)
