ಒಂದೇ ಮನೆಯ ನಾಲ್ವರು ಸಂಘಟಿತರಾಗಿ ಪಕ್ಕದ ಮನೆಯ ದಂಪತಿಗಳ ಮೇಲೆ ದೈಹಿಕ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಸಿದ್ಧಾಪುರದ ಹಸ್ವಿಗುಳಿಯ ಒಂದೇ ಕುಟುಂಬದ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ.
ಗುರುವಾರ ದಿನ ಸಾಯಂಕಾಲ ಪಾರ್ವತಿ ಈಶ್ವರ ನಾಯ್ಕ ಹುಲ್ಲು ಸವರುತಿದ್ದಾಗ ಅವರ ಪಕ್ಕದ ಮನೆಯ ಶರತ್ ಕುಮಾರ ವೆಂಕಟೇಶ್ ನಾಯ್ಕ ಬಡಿಗೆಯಿಂದ ಹೊಡೆಯಲು ಬಂದು ಕೊಲೆ ಬೆದರಿಕೆ ಹಾಕಿದ ಬಗ್ಗೆ ಪ್ರಕರಣ ದಾಖಲಾಗಿದೆ.
ಇದೇ ದೂರುದಾರರು ಈ ಹಿಂದೆ ವೆಂಕಟೇಶ್ ನಾಯ್ಕ ಕುಟುಂಬದವರು ತಮಗೆ ಕಿರುಕುಳ ಕೊಡುತ್ತಾ ಹೆದರಿಸುತ್ತಾರೆ ಎಂದು ಪೊಲೀಸ್ ದೂರು ನೀಡಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ ವೆಂಕಟೇಶ್ ನಾಯ್ಕ ಹಸ್ವಿಗುಳಿಯವರ ಕುಟುಂಬದ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ.