ಹೋರಾಟ, ಹೋರಾಟ ಸಾರಾಯಿ ವಿರುದ್ಧ ಹೋರಾಟ ಎಂದು ಫಲಕಗಳನ್ನು ಹಿಡಿದ ಸಮೂಹ ನಗರದಲ್ಲಿ ಓಡಾಡುತಿದ್ದಾಗ ಜನ ಕೆಲವು ಕ್ಷಣ ಕಿವಿಯರಳಿಸಿ ಕೇಳಿದರು, ಕಣ್ಣರಳಿಸಿ ನೋಡಿದರು.
ಇದು ಸಾರಾಯಿ ವಿರುದ್ಧದ ಹೋರಾಟವಾಗಿತ್ತು. ಸಿದ್ದಾಪುರ ನೆಹರೂ ಮೈದಾನದಿಂದ ಹೊರಟ ಜಾಥಾ ಶಂಕರಮಠ ಸಮೀಪಿಸಿ ಸಮಾವೇಶಗೊಳ್ಳುವವರೆಗೆ ದೊಡ್ಡ ಸಮೂಹ ಜಾಥಾ ನಡೆಸಿ ದಣಿದಿತ್ತು. ಶಂಕರಮಠ ಆವರಣದಲ್ಲಿ ಸೇರಿದ ಈ ಸಮೂಹದಲ್ಲಿದ್ದ ಕೆಲವರು ವೇದಿಕೆಯೇರಿ ತಮ್ಮ ಪರಿವರ್ತನೆ ಹೇಳಿಕೊಂಡರು.
ಮಹಿಳೆಯರು ತಮ್ಮ ಗಂಡ ಕುಡಿತ ಬಿಟ್ಟಮೇಲೆ ಈಗ ಪಕ್ಕಾ ಸಂಸಾರಿಯಾಗಿದ್ದಾರೆ ಎಂದು ಸಂಬ್ರಮ, ಸಂತಸ ಹಂಚಿಕೊಂಡರು.
ಈ ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಎಚ್. ನಾಯ್ಕ ಕುಡಿತ ವ್ಯಕ್ತಿ, ಸಮಾಜ,ಸಮೂಹವನ್ನು ಸುಡುತ್ತದೆ ಎಂದರು.
ವಿಶೇಶ ಉಪನ್ಯಾಸ ನೀಡಿದ ರಾಮು ಕಿಣಿ ಸರಳವಾಗಿ ಸಮೃದ್ಧ ಬದುಕು ಕಟ್ಟಿಕೊಳ್ಳುವ ಗುಟ್ಟು ತಿಳಿಸಿದರು. ಸ್ವಯಂಸೇವಕರು, ಸಿಬ್ಬಂದಿ ಅಧಿಕಾರಿಗಳು ಅಚ್ಚುಕಟ್ಟಾದ ಕಾರ್ಯಕ್ರಮ ನಡೆಸಿ ಸಂಬ್ರಮಿಸಿದರು. ಇದು ಗಾಂಧಿ ಸ್ಮೃತಿ ಬೃಹತ್ ಜಾಗೃತಿ ಜಾಥಾ ಮತ್ತು ಸಮಾವೇಶ. ನಡೆದಿದ್ದು ಸಿದ್ಧಾಪುರ ಶಂಕರಮಠದಲ್ಲಿ, ಆಯೋಜನೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ.