ಮಲೆನಾಡಿನ ರೈತರ ಜೀವನಾಧಾರವಾದ ಅಡಕೆಗೆ ಕೊಳೆರೋಗ, ಎಲೆಚುಕ್ಕಿ ರೋಗ ಬಂದು ಹಾನಿಯಾಗುತಿದ್ದರೂ ಸರ್ಕಾರ,ಅಧಿಕಾರಿಗಳು, ಶಾಸಕರು ಸ್ಫಂದಿಸುತ್ತಿಲ್ಲ ಎಂದು ಬಿ.ಜೆ.ಪಿ. ದೂರಿದೆ.
ಇಂದು ಈ ಬಗ್ಗೆ ಸಿದ್ಧಾಪುರ ತಹಸಿಲ್ಧಾರರ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದಾಪುರ ಬಿ.ಜೆ.ಪಿ. ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ತಾಲೂಕಿನಲ್ಲಿ ಅಡಿಕೆ ಬೆಳೆಗಾರರ ಬವಣೆ ವಿಪರೀತವಾಗಿದೆ ಇದಕ್ಕೆ ಸರ್ಕಾರ ಮತ್ತು ಶಾಸಕರ ಸ್ಪಂದನ ಇಲ್ಲ ಎಂದು ಆಕ್ಷೇಪಿಸಿದ ಅವರು ಹಿಂದೆ ಬಿ.ಜೆ.ಪಿ. ಸರ್ಕಾರವಿದ್ದಾಗ ಉಚಿತ ಔಷಧ ನೀಡಿ ರೈತರಿಗೆ ನೆರವಾಗಿತ್ತು, ಈಗ ಶಾಸಕರು, ಸರ್ಕಾರ ರೈತರ ಪರವಾಗಿ ಸ್ಫಂದಿಸದೆ ಅನ್ಯಾಯ ಮಾಡುತ್ತಿದೆ ಎಂದರು.
ಇದೇ ವೇಳೆ ಮಾತನಾಡಿದ ಪ.ಪಂ. ಸದಸ್ಯ ಗುರುರಾಜ್ ಶಾನಭಾಗ ಅಡಕೆ ಎಲೆಚುಕ್ಕಿ ರೋಗಕ್ಕೆ ಸರ್ಕಾರದ ಸಲಹೆ ಇಲ್ಲ. ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ನೀಡುವ ವರದಿಯಿಂದ ರೈತರಿಗೆ ನ್ಯಾಯ ದೊರೆಯುವುದಿಲ್ಲ, ಅರ್ಧಕ್ಕಿಂತ ಹೆಚ್ಚಿನ ಹಾನಿ ಅನುಭವಿಸಿದ ಅಡಕೆ ಬೆಳೆಯ ಶೇಕಡಾ ೧.೬ ಹಾನಿ ಎನ್ನುವ ಇಲಾಖೆ ವರದಿ ರೈತರಿಗೆ ಕಂಟಕ ತರಲಿದೆ ಎಂದು ಆರೋಪಿಸಿದರು.