ಶಿರಸಿ ತಾಲೂಕಿನ ಹಾರುಗಾರ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ ಶಿರಸಿ ಎಂ. ಇ. ಎಸ್. ಆರ್. ಎನ್. ಶೆಟ್ಟಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಮೊದಲ ವರ್ಷದ ಇಲೆಕ್ಟ್ರಾನಿಕ್ಸ್ ವಿಭಾಗದ ವಿಧ್ಯಾರ್ಥಿ ಮನೋಜ್ ಜಿ. ಹೆಗಡೆ.
ಇಂದು ಬೆಳಿಗ್ಗೆ ಪರೀಕ್ಷೆ ಬರೆಯಲು ಶಿರಸಿಗೆ ಬರುತ್ತಿದ್ದ ಸಂದರ್ಭದಲ್ಲಿ ನಡೆದ ಘಟನೆ.ಪರೀಕ್ಷೆ ಬರೆದು ಹಲ್ಲಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಹೋಗಬೇಕಾಗಿದ್ದ ವಿದ್ಯಾರ್ಥಿ.ಅಷ್ಟರಲ್ಲಿಯೇ ವಿಧಿ ವಿದ್ಯಾರ್ಥಿಯನ್ನು ಅಪಘಾತದಲ್ಲಿ ಬಲಿ ಪಡೆಯಿತು.ವಿದ್ಯಾರ್ಥಿಯ ಸಾವಿನ ಸುದ್ದಿ ಕೇಳಿ ಕಾಲೇಜಿನ ಆವರಿಸಿದ ಸೂತಕದ ಛಾಯೆ.ವಿದ್ಯಾರ್ಥಿಯ ಆತ್ಮಶಾಂತಿಗಾಗಿ ಕಾಲೇಜಿನಲ್ಲಿ ಒಂದು ನಿಮಿಷದ ಮೌನಾಚರಣೆ ನಡೆಯಿತು.
ಇಂದು ಮುಂಜಾನೆ ನಿಲ್ಕುಂದ ಶಿರಸಿ ಮಾರ್ಗದಲ್ಲಿ ನಡೆದ ಭೀಕರ ಅಪಘಾತ ಹಾರೂಗಾರ ಬಳಿಯ ಈ ದುರ್ಘಟನೆ ಚರ್ಚೆಯ ವಿಷಯವಾಗಿದೆ.