ಕರ್ನಾಟಕ ರಾಜ್ಯೋತ್ಸವ ೨೪ ಇಂದು ಸಂಬ್ರಮದಿಂದ ಆಚರಿಸಲಾಯಿತು. ಕನ್ನಡ ಜ್ಯೋತಿಗೆ ಚಾಲನೆ ನೀಡುವ ಮೂಲಕ ಶಾಸಕ ಭೀಮಣ್ಣ ನಾಯ್ಕ ಭುವನಗಿರಿಯಲ್ಲಿ ರಾಜ್ಯೋತ್ಸವ ಆಚರಣೆಗೆ ಚಾಲನೆ ನೀಡಿದರು. ಕನ್ನಡಜ್ಯೋತಿ ರಥ ಸಿದ್ಧಾಪುರಕ್ಕೆ ಬರುತ್ತಲೇ ಹೊಸೂರು ವೃತ್ತದ ಬಳಿ ತಾಲೂಕಾ ಆಡಳಿತದಿಂದ ಸ್ವಾಗತಿ ಸಲಾಯಿತು.
ಹೊಸೂರು ವೃತ್ತದ ಬಳಿ ಕನ್ನಡಾಂಬೆಗೆ ಪೂಜೆ ಸಲ್ಲಿಸಿ ಮೆರವಣಿಗೆ ಬಿಟ್ಟುಕೊಟ್ಟ ಶಾಸಕ ಭೀಮಣ್ಣ ತಾಲೂಕಾ ಆಡಳಿತದ ಪ್ರಮುಖರಿಗೆ ಮೆರವಣಿಗೆ ನೇತೃತ್ವ ನೀಡಿದರು. ಶಾಲಾ-ಕಾಲೇಜುಗಳ ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಕನ್ನಡ ಪರ ಸಂಘಟನೆಗಳ ಪ್ರಮುಖರು, ಕ.ಸಾ.ಪ. ಸದಸ್ಯರು ಮರವಣಿಗೆಯಲ್ಲಿ ಸಾಗಿ ನೆಹರೂ ಮೈದಾನದಲ್ಲಿ ಸಮಾವೇಶಗೊಂಡರು. ನಂತರ ಕನ್ನಡ ಕಾರ್ಯಕ್ರಮಗಳು, ಧ್ವಜಾರೋಹಣ, ಸನ್ಮಾನ ನಡೆದು ಕಾರ್ಯಕ್ರಮ ಮುಕ್ತಾಯವಾಯಿತು.