ಸಿದ್ಧಾಪುರ (ಉ.ಕ.) ದೀಪಾವಳಿಯ ಬೂರೆ ಕಾಯಿ ಒಡೆಯುವ ವಿಚಾರದಲ್ಲಿ ಗಲಾಟೆಯಾಗಿ ಪರಸ್ಫರ ಎರಡು ಪ್ರಕರಣಗಳು ದಾಖಲಾದ ಘಟನೆ ಅರೆಂದೂರಿನಲ್ಲಿ ನಡೆದಿದೆ. ಅರೆಂದೂರಿನ ಒಂದು ಧರ್ಮದ ಒಂದು ಗುಂಪು ತಮಗೆ ಬೂರೆ ಕಾಯಿ ಒಡೆಯಲು ಕೊಡದೆ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದೆ ಎಂದು ಅನ್ಯಕೋಮಿನ ಇಬ್ಬರ ಮೇಲೆ ಪ್ರಕರಣ ದಾಖಲಿಸಿದ್ದರೆ. ಇನ್ನೊಂದು ಧರ್ಮದ ಇಬ್ಬರು ತಮಗೆ ಬೂರೆ ಕಾಯಿ ಆಡಲು ಕೊಡದೆ ಗಲಾಟೆ ತೆಗೆದು ಹಲ್ಲೆಗೆ ಪ್ರಯತ್ನಿಸಿದೆ ಎಂದು ದೂರು ದಾಖಲಿಸಿದೆ.
ಸಲೀಂ ಮತ್ತು ಕಲಿಂ ಹುಸೇನ್ ಸಹೋದರರು ಗಣೇಶ್ ಮಡಿವಾಳ ಮತ್ತು ರವಿ ಒಕ್ಕಲಿಗ ಎಂಬುವವರ ಮೇಲೆ ದೂರು ನೀಡಿದ್ದರೆ, ಗಣೇಶ್ ಮತ್ತು ರವಿ ಪರವಾಗಿ ನಾಗೇಶ್ ಮಡಿವಾಳ ಸಲೀಂ ಮತ್ತು ಕಲೀಂ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಕ್ಷುಲ್ಲಕ ವಿಚಾರದ ಗಲಾಟೆ ಸೋಮವಾರ ಸಾಯಂಕಾಲ ನಡೆದಿದ್ದು ಪರಸ್ಫರರ ಮೇಲೆ ತಡ ರಾತ್ರಿ ಪ್ರಕರಣ ದಾಖಲಿಸಲಾಗಿದೆ.