ಪ್ರಧಾನಿ ಮೋದಿ ದೊಡ್ಡ ಹೂಡಿಕೆಗಳನ್ನು ಗುಜರಾತ್ ಗೆ ವರ್ಗಾಯಿಸುತ್ತಾ ಇತರ ರಾಜ್ಯಗಳಿಗೆ ಅನ್ಯಾಯ ಮಾಡುತಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಗುಜರಾತ್ ಪ್ರೀತಿಯ ಬಗ್ಗೆ ಟೀಕಿಸಿರುವ ಕಾಂಗ್ರೆಸ್ ನ ಹಿರಿಯ ನಾಯಕ ಮತ್ತು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಪ್ರಧಾನಿಯವರ ಈ ವಿಶೇಶ ಪ್ರೀತಿಯಿಂದಾಗಿ ಇತರ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಪ್ರವಾಸದಲ್ಲಿರುವ ದೇಶಪಾಂಡೆ ಸಿದ್ಧಾಪುರದಲ್ಲಿ samajamukhi.net ಡಿಜಿಟಲ್ ಪ್ರತಿನಿಧಿ ಜೊತೆ ಮಾತನಾಡಿ ದೇಶದ ಪ್ರಗತಿಯಲ್ಲಿ ಕೈಗಾರಿಕೆಗಳ ಪಾತ್ರ ದೊಡ್ಡದು ಆದರೆ ಎನ್.ಡಿ.ಎ. ಸರ್ಕಾರ ಕೆಲವು ರಾಜ್ಯಗಳಿಗೆ ಸಿಂಹಪಾಲು ಕೊಟ್ಟು ಹಲವು ರಾಜ್ಯಗಳಿಗೆ ವಂಚಿಸುತ್ತಿರುವುದು ಅವರ ಪಕ್ಷಪಾತದ ಧ್ಯೋತಕ ಎಂದರು.
ವಕ್ಫ ವಿವಾದ ಬಿ.ಜೆ.ಪಿ.ಯ ಕಾರಸ್ಥಾನ ಎಂದು ದೂಷಿಸಿದ ಕಾಂಗ್ರೆಸ್ ನ ಹಿರಿಯ ನಾಯಕ ದೇಶಪಾಂಡೆ ಬಿ.ಜೆ.ಪಿ. ಆಡಳಿತಾವಧಿಯ ತಪ್ಪಿಗೆ ಕಾಂಗ್ರೆಸ್, ಮುಖ್ಯಮಂತ್ರಿ ಹೇಗೆ ಹೊಣೆಯಾಗುತ್ತಾರೆ ಎಂದು ಪ್ರಶ್ನಿಸಿದರು ಚುನಾವಣೆ ಮುಂದಿಟ್ಟುಕೊಂಡು ಬಿ.ಜೆ.ಪಿ. ಮಾಡುವ ಕೆಳಮಟ್ಟದ ರಾಜಕಾರಣಕ್ಕೆ ಜನರೇ ಉತ್ತರ ನೀಡುತ್ತಾರೆ. ಬಿ.ಜೆ.ಪಿ. ಸುಳ್ಳು, ಕುತಂತ್ರಗಳು ಜನಸಾಮಾನ್ಯರಿಗೂ ಅರ್ಥವಾಗುತ್ತವೆ ಎಂದು ಅವರು ವಿವರಿಸಿದರು.
ಕಾಂಗ್ರೆಸ್ ರೈತ ಪರವಾಗಿದ್ದು ಮಳೆ, ಕೊಳೆ, ಪ್ರವಾಹದಿಂದ ತೊಂದರೆಗಳಗಾಗಿರುವ ರೈತರ ಪರವಾಗಿ ಕಾಂಗ್ರೆಸ್ ಮತ್ತು ರಾಜ್ಯ ಸರ್ಕಾರ ಕೆಲಸ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.