ಗಡಿನಾಡ ಪ್ರದೇಶಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಬೇಕು ಈ ಬಾರಿಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಕನ್ನಡ ಹೋರಾಟಗಾರ ವಾಟಾಳ ನಾಗರಾಜ್ ರನ್ನು ಆಯ್ಕೆ ಮಾಡಬೇಕು ಎಂದು ಆಗ್ರಹಿಸಿರುವ ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರೀ ರಮೇಶ ಕನ್ನಡಿಗರ ಪ್ರೀತಿ ಸ್ವಾಭಿಮಾನದ ಸಂಸ್ಥೆ ರಾಜ್ಯಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ ಇವನ್ನೆಲ್ಲಾ ಮರೆತು ಹಣ ಹೊಡೆಯುವ ಸರ್ವಾಧಿಕಾರಿ ಆಗಿರುವುದು ದುರಂತ ಎಂದು ಆರೋಪಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತನ್ನು ಮಾಫಿಯಾ ರೀತಿಯಲ್ಲಿ ಪರಿವರ್ತಿಸಿರುವ ಮಹೇಶ್ ಜೋಷಿ ತಮ್ಮ ಧೋರಣೆ ಬದಲಿಸಿ ನಮ್ಮ ಸಲಹೆಗಳಿಗೆ ಗೌರವಿಸದಿದ್ದರೆ ಅವರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿರುವ ರಮೇಶ್ ಮಂಡ್ಯದಲ್ಲಿ ಬಂದು ಜೋಷಿ ಮಾಡುತ್ತಿರುವ ನಾಟಕಕ್ಕೆ ಮಂಡ್ಯ ಮತ್ತು ರಾಜ್ಯದ ಜನರ ಬೆಂಬಲ ಸಿಗುವುದಿಲ್ಲ ಎಂದರು.
ಮಹೇಶ್ ಜೋಷಿ ಈಗ ಯುರೋಪ್ ಪ್ರವಾಸದಲ್ಲಿದ್ದಾರೆ ಕನ್ನಡ ಜನರ ತೆರಿಗೆ ಹಣದಲ್ಲಿ ಮೋಜು ಮಾಡುವ ಜೋಷಿ ಕನ್ನಡ ಸಾಹಿತ್ಯ ಪರಿಷತ್ತನ್ನು ಮಾಫಿಯಾ ರೀತಿ ಬದಲಾಯಿಸಿದ್ದಕ್ಕೆ ಅನೇಕ ಜಿಲ್ಲೆಗಳ ಅಧ್ಯಕ್ಷರ ವಿರೋಧವಿದೆ ಎಂದರು.