ಶಿರಸಿ ನಗರದಲ್ಲಿ ಸೈಬರ್ ಅಪರಾಧಗಳ ಜಾಗೃತಿಗಾಗಿ ಶಿರಸಿ ನಗರ ಠಾಣೆಯ ಪೊಲೀಸರು ” ಪೊಸ್ಟರ್ ಅಭಿಯಾನ”ವನ್ನು ಹಮ್ಮಿಕೊಂಡಿದ್ದಾರೆ,
ಶಿರಸಿಯ ಕೆನರಾ ಬ್ಯಾಂಕ್ ಹಾಗೂ ಶಿರಸಿ ನಗರ ಪೊಲೀಸ್ ಠಾಣೆಯ ಸಹಭಾಗಿತ್ವದಲ್ಲಿ ಸಾರ್ವಜನಿಕರಿಗೆ ಸೈಬರ್ ಸುರಕ್ಷತೆ ಮತ್ತು ಭದ್ರತೆ ಹಾಗೂ ಅಪರಾಧಗಳ ಕುರಿತು ಜಾಗೃತಿ ಮೂಡಿಸಲು “ಪೊಸ್ಟರ ಅಭಿಯಾನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು
ಇಂದು ಶಿರಸಿ ಉಪವಿಭಾಗದ ಡಿಎಸ್ಪಿ ಗಣೇಶ ಕೆಎಲ್ ರವರು ಪೊಸ್ಟರ್ ಬಿಡುಗಡೆ ಮಾಡಿ ಶಿರಸಿ ನಗರ ಠಾಣೆಯ ವತಿಯಿಂದ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲು ಬ್ಯಾಂಕ್,ಬಸ್ಟ್ಯಾಂಡ್,ಆಟೋ ಸ್ಟ್ಯಾಂಡ್,ಮಾಲ್ ಗಳು,ಮಾರುಕಟ್ಟೆಯಂತಹ ಜನಸಂದಣಿ ಪ್ರದೇಶಗಳಲ್ಲಿ ಪೊಸ್ಟರ್ ಅಭಿಯಾನ ಕೈಗೊಳ್ಳಲಿದ್ದು,ಸಾರ್ವಜನಿಕರು ಸಹ ಸೈಬರ್ ಸುರಕ್ಷತೆ,ಭದ್ರತೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಿರಸಿ ವೃತ್ತ ನಿರೀಕ್ಷಕರಾದ ಶಶಿಕಾಂತ ವರ್ಮಾ,ನಗರ ಠಾಣೆ ಪಿಎಸ್ಐ ನಾಗಪ್ಪ.ಬಿ, ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಜಂಜೇಶ್ವರ ಭಾವಾ,ಸಹಾಯಕ ವ್ಯವಸ್ಥಾಪಕ ಯೋಗೇಶ ಪಾಟೀಲ್ ಹಾಗೂ ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.