ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ ಡೊಳ್ಳಿನ ಸಂಘ ಕೊಡಗಿಬೈಲ್ ಸಿದ್ದಾಪುರ ದ್ವಿತೀಯ ಹಾಗು ಕನ್ನಡ ಜಾನಪದ ಕಲಾತಂಡ ಹೊಸಕೊಪ್ಪ ಸಾಗರ ತಂಡ ತ್ರತೀಯ ಸ್ಥಾನಗಳಿಸಿದೆ.
ಸಿದ್ದಾಪುರದಲ್ಲಿ ಮೊದಲ ಬಾರಿಗೆ ನಡೆದ ಈ ಡೊಳ್ಳು ಕುಣಿತ ಸ್ಪರ್ಧೆಯನ್ನು ಸಾವಿರಾರು ಜನರು ಕೊರೆವ ಚಳಿಯನ್ನು ಲೆಕ್ಕಿಸದೆ ಡೊಳ್ಳು ಕುಣಿತದ ಮೋಜನ್ನು ಅನುಭವಿಸಿದರು.