


ವ್ಯಾಪಾರ ವ್ಯವಹಾರದಲ್ಲಿ ವಿಶ್ವಾಸ ಮುಖ್ಯ ಎಂದು ಪ್ರತಿಪಾದಿಸಿರುವ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದ ಒಡೇರ್ ಸ್ವಾಮೀಜಿ ಬ್ಯಾಂಕ್ ಪ್ರಗತಿ, ನಿರಂತರತೆ ಹಿಂದೆ ಗ್ರಾಹಕರ ವಿಶ್ವಾಸ ಕೆಲಸ ಮಾಡುತ್ತದೆ ಎಂದರು.

ಸಿದ್ಧಾಪುರದಲ್ಲಿ ಕೃಷಿ ಮಾರುಕಟ್ಟೆ ಪ್ರಾಂಗಣ ರಸ್ತೆಯ ನೂತನ ಕಟ್ಟಡದಲ್ಲಿ ದಿ. ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿ. ಶಿರಸಿಯ ೨೨ ನೇ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು ಒಂದು ಸಂಸ್ಥೆ ನೂರು ವರ್ಷ ಪೂರೈಸಿ ಪ್ರಗತಿಯ ದಾಪುಗಾಲು ಹಾಕಲು ಗ್ರಾಹಕರು, ಸಿಬ್ಬಂದಿ, ಆಡಳಿತ ಮಂಡಳಿಗಳ ಪ್ರಯತ್ನ ಮುಖ್ಯ ಎಲ್ಲವೂ ಸರಿ ಇದ್ದಾಗ ಗ್ರಾಹಕ ಮೆಚ್ಚುತ್ತಾನೆ ಎಂದು ಈಗಿನ ಅಧ್ಯಕ್ಷ ಜಯದೇವ ನೀಲೇಕಣಿಯವರನ್ನು ಉದಾಹರಿಸಿ ಮಾರ್ಮಿಕವಾಗಿ ನುಡಿದರು.

ಶಿಸ್ತುಬದ್ಧ, ಚುಟುಕಾದ ಕಾರ್ಯಕ್ರಮಕ್ಕೆ ಕೆ. ಎನ್. ಹೊಸಮನಿ ನಿರೂಪಿಸಿದರು. ಪ್ರಾಸ್ಥಾವಿಕವಾಗಿ ಮಾತನಾಡಿದ ಬ್ಯಾಂಕ್ ನ ಅಧ್ಯಕ್ಷ ಜಯದೇವ ನಿಲೇಕಣಿ ಸಂಸ್ಥೆಯ ಸಾಧನೆ ತಿಳಿಸಿದರು.

