


ದಾಯಾದಿ ಜಗಳದಲ್ಲಿ ವ್ಯಕ್ತಿಯೊರ್ವರಿಗೆ ಈರ್ವರು ಸೇರಿ ದಾರಿಮಧ್ಯೆ ಅಡ್ಡಗಟ್ಟಿ ಕಣ್ಣಿಗೆ ಕಾರದಪುಡಿ ಎರಚಿ ತಲೆಗೆ ಕಬ್ಬಿಣದ ರಾಡಿನಿಂದ ಹೊಡೆದು ಜೀವ ಬೆದರಿಕೆ ಹಾಕಿದ ಘಟನೆ ಸಿದ್ದಾಪುರ ತಾಲೂಕಿನ ಹಾರೆಗೊಪ್ಪ ಶಾಲೆ ಹತ್ತಿರ ನಡೆದಿದೆ.

ನೆಜ್ಜೂರ ಗ್ರಾಮದ ಗಣಪತಿ ಧರ್ಮ ಬೋವಿ ಹಲ್ಲೆಗೊಳಗಾದ ವ್ಯಕ್ತಿಯಾದರೆ, ಇದೇ ಗ್ರಾಮದ ಭೂತ ನಾಗ ಬೋವಿ ಮತ್ತು ಗಣಪತಿ ಬೀರ ಬೋವಿ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.ನೀಡಿದ ಸಾಲ ಮರಳಿ ಕೇಳಿದಕ್ಕೆ ಜಗಳ ನಡೆದಿರುವ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

