ನೀನಾಸಂ ಅಂಕದ ಪರದೆ ಸರಿದಾಗ……..

ನಾಟಕ ಕಲೆ ಸಾಹಿತ್ಯ, ಸಂಗೀತ, ಸಾಂಸ್ಕೃತಿಕತೆಗಳ ಅತ್ಯಂತಿಕ ಉದ್ದೇಶ ಮಾನವನ ಬದುಕನ್ನು ಮತ್ತಷ್ಟು ಹಸನಾಗಿಸುವುದು. ಇದನ್ನು ಕಲಾವಿದ, ಹೋರಾಟಗಾರ ಅಥವಾ ಯಾವುದೋ ಕೆಲವೇ ಕ್ಷೇತ್ರಗಳ ಜನರು ಮಾತ್ರ ನಿರ್ವಹಿಸುವ ಗುತ್ತಿಗೆಯೆ?

ಹೀಗಾದಾಗ ಏನೇನೆಲ್ಲಾ ಸಂಭವಿಸಬಹುದು ಎನ್ನುವ ಕಥಾ ಹಂದರಕ್ಕೆ ಸ್ವಲ್ಪ ತಮಾಸೆ, ಸತ್ಯ, ವಾಸ್ತವ,ಕಲ್ಪನೆ ಬೆರಸಿದರೆ ಒಂದು ಅಂಕದ ಪರದೆ ನಾಟಕ ಸಿದ್ಧವಾಗುತ್ತದೆ.

ಮರಾಠಿ ಮೂಲದ ಅಬಿರಾಮ ಭಡ್ಕಮಕರ್‌ ನಾಟಕ ಜಯಂತ ಕಾಯ್ಕಿಣಿಯವರ ಕನ್ನಡ ಅವತರಣಿಕೆ ನೀನಾಸಂ ಕಲಾವಿದರ ಮೂಲಕ ರಂಗಭೂಮಿಗೆ ಬಂದ ಅಂಕದ ಪರದೆ ರಂಗಭೂಮಿ ಮೂಲಕ ಒಂದು ಸಮಾಜಮುಖಿ ಚಿಂತನೆಯನ್ನು ಎಷ್ಟು ಹೃದ್ಯವಾಗಿ ಹರಡಬಹುದು ಎಂಬುದಕ್ಕೆ ಉದಾಹರಣೆಯಂತಿದೆ. ವೃದ್ಧಾಶ್ರಮ ಸೇರುವ ಕೆಲವರಲ್ಲಿ ಒಂದು ಹೋರಾಟಗಾರನ ಜೋಡಿ, ರಂಗಭೂಮಿ ಕಲಾವಿದ ಜೊತೆಗೆ ಕೆಲವು ವಿಭಿನ್ನ ಕ್ಷೇತ್ರದ ವೃದ್ಧರು. ಅವರೆಲ್ಲಾ ಮಕ್ಕಳಿಂದ ವಿಮುಖರಾಗಿ ಆಶ್ರಮ ಸೇರಿದವರಲ್ಲದಿದ್ದರೂ ಎಲ್ಲರೂ ತಮ್ಮ ಸಿದ್ಧಾಂತ,ಕರ್ತವ್ಯ ಬದ್ಧತೆಗೆ ಹೆಸರಾದವರು. ಅವರವರಲ್ಲೇ ತುಸು ಅನುಮಾನ, ಹೊಂದಾಣಿಕೆಯ ಕೊರತೆ ಆದರೆ ಜೊತೆಗಿರಬೇಕಾದ ಅನಿವಾರ್ಯ ವಾಸ್ತವವಿದೆಯಲ್ಲ ಅದು ಅವರಲ್ಲಿ ವಿಚಿತ್ರ ಲವಲವಿಕೆಗೂ ಕಾರಣವಾಗುತ್ತದೆ.

ಮಾಜಿ ಕಲಾವಿದ ರಂಗಭೂಮಿ, ರಂಗಪ್ರಯೋಗ, ಪಾತ್ರಗಳ ನೆನೆದು ಗಂಭೀರನಾಗುತ್ತಲೇ ಭಾವುಕನಾಗುವುದು, ಹೋರಾಟಗಾರ ಗಥದ ವೈಭವದಲ್ಲಿ ಮೈಮರೆಯುವುದು,ಪ್ರಾಮಾಣಿಕ ಉದ್ಯೋಗಿಯೊಬ್ಬನ ಮಗನ ದುರಂತ ಸಾವಿನ ನೆನಪು ವಾಸ್ತವವನ್ನು ವಿವರಿಸಲು ಬಳಕೆಯಾದ ಪಾತ್ರಗಳು ಹೀಗೆ ಮೂಲಕ್ಕೆ ಭಂಗಬರದೆ ತಮ್ಮ ಭಾಷೆ, ನವ ಶಬ್ಧಗಳು, ಸರಳವಾದ ಕಟ್ಟುವಿಕೆ ಗಳನ್ನೆಲ್ಲಾ ಸೇರಿಸಿ ಅನುವಾದಿಸಿದ ಜಯಂತ ಕಾಯ್ಕಿಣಿಯವರ (ಭಾಷಾ) ರೂಪಾಂತರ ನಮ್ಮ ನೆಲದ ನೇಟಿವಿಟಿಗಿಂತ ಭಿನ್ನ ಎನ್ನುವ ತಕರಾರು ಎತ್ತಲು ಸಾಧ್ಯವಿಲ್ಲದಷ್ಟು ಸೊಗಸಾಗಿದೆ.

ಒಂದು ಸಂವಿಧಾನ, ಒಂದು ಆಡಳಿತ ಅಪಾತ್ರರ ಕೈಗೆ ಸಿಕ್ಕರೆ ಹೇಗೆ ದಿಕ್ಕು ತಪ್ಪುತ್ತದೆಯೋ ಹಾಗೆಯೇ ನಾಟಕ, ಸಾಹಿತ್ಯದ ಆಶಯ ಯೋಗ್ಯರಿಗೆ ಸಿಗದಿದ್ದರೆ ಅದರ ಸಾರ್ಥಕತೆಗೆ ಕುಂದಾಗುತ್ತದೆ. ಮರಾಠಿ ಮೂಲದ ಕತೆ, ಜಯಂತರ ಸೊಗಸಾದ ನಿರೂಪಣೆಯ ಭಾಷೆ, ಈ ವಿಶೇಶಗಳಿಗೆ ಒಪ್ಪವಿಟ್ಟಂತಹ ನೀನಾಸಂ ಕಲಾವಿದರ ಲವಲವಿಕೆಯ ಭಾಗವಿಸುವಿಕೆ ಇವೆಲ್ಲಾ ಸೇರಿ ಅಂಕದ ಪರದೆಯನ್ನು ಕಲಾತ್ಮಕವಾಗಿ ಶೃಂಗರಿಸಿದಂತಾಗಿದೆ.

ನೀನಾಸಂ ಅನೇಕ ವರ್ಷಗಳಿಂದ ಇಂಥ ಪ್ರಯೋಗಗಳ ಮೂಲಕ ಚಾಲ್ತಿಯಲ್ಲಿದೆ. ಆದರೆ ಇಂಥ ಪ್ರಯತ್ನಗಳನ್ನು ಜನರ ನಡುವೆ ಕೊಂಡೊಯ್ಯುವವರು ಯಾರು? ರಾಜ್ಯಾದ್ಯಂತ ಅನೇಕ ಸಂಘ, ಸಂಸ್ಥೆ, ಸಂಘಟನೆ, ಸಮೂಹಗಳ ಮೂಲಕ ನೀನಾಸಂ ನ ಆಶಯ ಕೊನೆ ಮುಟ್ಟುತ್ತಿದೆ.ಈ ಪ್ರಯತ್ನಕ್ಕೆ ಸಿದ್ಧಾಪುರದಲ್ಲಿ ಕೈ ಜೋಡಿಸಿದವರು ಒಡ್ಡೋಲಗದ ಹಿತ್ತಲಕೈ ಗಣಪತಿ. ಕಲಾವಿದರಾದ ಗಣಪತಿ ಹಿತಲಕೈ ಸ್ಥಳೀಯ ಶಕರಮಠದ ನೆರವು ಪಡೆದು ಆಯೋಜಿಸಿದ್ದ ನೀನಾಸಂ ನ ನಾಟಕ ಪ್ರದರ್ಶನ ಈ ಎಲ್ಲಾ ಹಿನ್ನೆಲೆಗಳಲ್ಲಿ ಪ್ರಮುಖ ಎನಿಸಿತು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *