


ಸಿದ್ಧಾಪುರ (ಉ.ಕ.) ಸೊರಬಾ ರಸ್ತೆ ಬಸವನಗಲ್ಲಿಯಲ್ಲಿಇಂದು ಬೆಳಕಿಗೆ ಬಂದ ಎರಡು ದಿವಸಗಳ ಹಿಂದೆ ನಡೆದಿರಬಹುದಾದ ಒಂಟಿ ಮನೆ ವೃದ್ಧೆ ಕೊಲೆ ಸಾರ್ವಜನಿಕರಲ್ಲಿ ಆತಂಕ ಹುಟ್ಟುಹಾಕಿದೆ. ಸೊರಬಾ ರಸ್ತೆಯ ಪಿಗ್ಮಿ ಏಜೆಂಟ್ ಗೀತಮ್ಮ ಯಾನೆ ಗೀತಾ ಕುಂಡೇಕರ್ ಸೋಮುವಾರ ರಾತ್ರಿ ಕೊಲೆಯಾಗಿದ್ದಾರೆ. ( ಈ ಬಗ್ಗೆ ಅವರ ಅಳಿಯ ರಾಘವೇಂದ್ರ ನಾಯ್ಕ ದೂರು ನೀಡಿದ್ದಾರೆ.) ಈ ಕೊಲೆಯ ಬಗ್ಗೆ ವಿಳಂಬವಾಗಿ ವಿಷಯ ತಿಳಿಯಲು ಕಾರಣ ಅವರು ಒಬ್ಬಂಟಿಯಾಗಿ ವಾಸಿಸುತಿದ್ದುದ್ದು.

ಗೀತಾ ಕುಂಡೇಕರ್ ಶಿರಸಿ ಬಚವಾಂಗ್ ನ ಪ್ರಭಾಕರ್ ಕುಂಡೇಕರ್ ರನ್ನು ಮದುವೆಯಾಗಿ ಎರಡು ಜನ ಹೆಣ್ಣುಮಕ್ಕಳು ಜನಿಸಿದ ನಂತರ ಪತಿಯಿಂದ ವಿಚ್ಛೇದನ ಪಡೆದು ಒಬ್ಬಂಟಿಯಾಗಿ ವಾಸಿಸುತಿದ್ದರು. ಒಬ್ಬಳು ಮಗಳು, ಅಳಿಯ ಇಲ್ಲಿಯೇ ವಾಸವಿದ್ದರೂ ಪ್ರತ್ಯೇಕವಾಗಿ ನೆಲೆಸಿದ್ದಾರೆ. ಸಾಹಸಿ ಮಹಿಳೆಯಾದ ಗೀತಮ್ಮ ಸ್ಥಳೀಯ ವಿನಾಯಕ ಸೌಹಾರ್ದದಲ್ಲಿ ಪಿಗ್ಮಿ ಏಜೆಂಟಾಗಿ ಕೆಲಸಮಾಡುತಿದ್ದರು.


ಎಂದಿನಂತೆ ತನ್ನ ಕೆಲಸ, ತಾನು ಎಂದುಕೊಂಡ ಮಹಿಳೆ ಸೋಮವಾರ ಕೂಡಾ ರಾತ್ರಿ ಹತ್ತು ಗಂಟೆಯ ವರೆಗೆ ಪಿಗ್ಮಿ ಸಂಗ್ರಹಿಸಿದವರು ರಾತ್ರಿ ಮಲಗಿದ್ದಾಗ ಬಂದ ಆಗಂತುಕ ಇವರ ಮನೆಯ ಬಚ್ಚಲಕೋಣೆ ಮೇಲಿನ ಹೆಂಚು ತೆಗೆದು ಒಳ ಪ್ರವೇಶಿಸಿ ಹಣ ಕದ್ದು ಗೀತಾಳ ಕುತ್ತಿಗೆ ಹಿಚುಕಿ ಕೊಂದಿರುವ ಬಗ್ಗೆ ದೂರು ದಾಖಲಾಗಿದೆ.

ದೂರು ಪಡೆದ ಪೊಲೀಸರು ಇಂದು ಅಗತ್ಯ ಪ್ರಕ್ರೀಯೆ ಮುಗಿಸಿ ಪೋಸ್ಟ್ ಮಾರ್ಟಮ್ ಗೆ ದೇಹವನ್ನು ಕಾರವಾರಕ್ಕೆ ರವಾನಿಸಿದ್ದಾರೆ. ಕೊಲೆಗಾರ ಆಗಂತುಕ ಯಾರೆಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದು ಒಬ್ಬನ ಮೇಲೆ ಸಂಶಯ! ವ್ಯಕ್ತಪಡಿಸಿದ್ದಾರೆ. ಡಾಗ್ ಸ್ಕ್ವಾಡ್ ಇತರ ಸಾಕ್ಷಿ-ದಾಖಲೆಗಳ ಆಧಾರದಲ್ಲಿ ೨೪ ಗಂಟೆಯ ಒಳಗೆ ಆರೋಪಿ ಅಂದರ್ ಆಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.
