ಪಿಗ್ಮಿ ಏಜೆಂಟ್‌ ಕೊಂದ ಕಳ್ಳ ನುರಿತ ಅಪರಾಧಿ!

ಸಿದ್ದಾಪುರ,ಡಿ.೩೧- ಅಂತೂ ಇಂತೂ ಸಿದ್ಧಾಪುರದ ಪಿಗ್ಮಿ ಏಜೆಂಟ್‌ ಗೀತಮ್ಮ ಕೊಲೆಯ ಆರೋಪಿ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ. ವೃತ್ತಿಪರ ಅಪರಾಧಿಯಾಗಿರುವ ಅಭಿಜಿತ್‌ ಗಣಪತಿ ಮಡಿವಾಳ ಗೀತಮ್ಮಳ ಕೊಲೆ ಮಾಡುವ ಮೊದಲು ಸಣ್ಣ-ಪುಟ್ಟ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡ ಯುವಕ.‌

ಕೆಲವು ಕಾಲ ಬೆಂಗಳೂರಿನಲ್ಲಿ ಆಟೋ ಚಲಾಯಿಸಿ ಬದುಕುತಿದ್ದ ಈತ ಮದ್ಯವ್ಯಸನಿ, ದಿನದ ಕರ್ಚು,ಚಟಗಳಿಗಾಗಿ ಸಾರ್ವಜನಿಕರಿಂದ ಹಣ ಪೀಕುತಿದ್ದ ಈತ ಸಜ್ಜನರ ಜೇಬಿಗೂ ಕೈ ಹಾಕಿ ಹಣ ಲಪಟಾಯಿಸಿ ಜನರನ್ನು ಹೆದರಿಸುತಿದ್ದ ಈ ಚರಿತ್ರೆಯ ಈತ ಆರೋಪಿಯೆಂದು ನಿರ್ಧರಿಸಲು ಪೊಲೀಸರಿಗೆ ಸಮಯ ಬೇಕಾಗಿರಲಿಲ್ಲ. ಆದರೆ ನುರಿತ ಅಪರಾಧಿಯಾಗಿರುವ ಈತ ಪೊಲೀಸರ ದಾರಿ ತಪ್ಪಿಸುವ ಕಾರ್ಯದಲ್ಲಿ ಯಶಸ್ವಿಯಾಗಿ ಎರಡು ದಿನ ಹಾಯಾಗಿ ತಿರುಗಿಕೊಂಡಿದ್ದ!.

ಡಿ.೨೩ ರ ರಾತ್ರಿ ಸಿದ್ಧಾಪುರ ನಗರದ ವೈನ್‌ ಶಾಪ್‌ ಒಂದರಲ್ಲಿ ಕಂಟಮಟ ಕುಡಿದವನು ತನ್ನ ಸಹಚರರ ಕಣ್ಣುತಪ್ಪಿಸಿ ನಗರದ ಸೊರಬಾ ರಸ್ತೆಯ ಗೀತಮ್ಮನ ಮನೆ ಸೇರುವ ಮೊದಲು ಈ ಅಭಿಜಿತ್‌ ನಗರದ ಕಾಳಿದಾಸ ಗಲ್ಲಿಯ ತನ್ನ ಮಾಮೂಲು ಅಡ್ಡೆಗೂ ಬಂದು ಹೋಗಿದ್ದ!

ಸೋಮುವಾರ ದಿನ ಮೊಬೈಲ್‌ ಬಳಸದ ಅಭಿಜಿತ್‌ ನಗರದಲ್ಲಿ ಮಾಮೂಲಿನಂತೆ ಓಡಾಡಿ ಯಾರಿಗೂ ಅನುಮಾನ ಬರದಂತೆ ಪ್ರಮುಖ ಸಿ.ಸಿ. ಕೆಮರಾಗಳ ಕಣ್ಣುತಪ್ಪಿಸಿ! ಒಳ ರಸ್ತೆಯಲ್ಲಿ ಗೀತಾಳ ಮನೆಯ ಹಿಂದಿನ ಮಾಡಿನ ಹೆಂಚು ತೆಗೆದು ಒಳನುಸುಳಿ ಹೊಂಚುಹಾಕಿ ಸ್ನಾನದ ಮನೆಯ ಬಳಿ ಅಡಗಿ ಕುಳಿತಿದ್ದ, ಈ ಕಳ್ಳನನ್ನು ನಿರೀಕ್ಷಿಸದ ಗೀತಾ ಮಾಮೂಲಿನಂತೆ ಹತ್ತು ಗಂಟೆಯ ಸಮಯಕ್ಕೆ ಮನೆಗೆ ಬಂದವಳು ಸ್ನಾನದ ಮನೆಗೆ ಬರಲು ಕದ ತೆಗಿದ್ದಾಳೆ. ಅಲ್ಲೇ ಹೊಂಚುಹಾಕಿಕಾದಿದ್ದ ಅಭಿಜಿತ್ ಗೀತಾಳ ಬಾಯಿ ಮುಚ್ಚಿಸಲು ಬಾಯಿ ಮತ್ತು ಗಂಟಲು ಹಿಡಿದು ಕೂಗಿಕೊಳ್ಳದಂತೆ ತಡೆದಿದ್ದಾನೆ. ಏಕಕಾಲದಲ್ಲಿ ಬಾಯಿ, ಗಂಟಲು ಅದುಮಿದ್ದಕ್ಕೆ ಉಸಿರು ನಿಂತು ಹೋಗಿದೆ. ಅದನ್ನೂ ಸರಿಯಾಗಿ ಲೆಕ್ಕಿಸದ ಅಭಿಜಿತ್‌ ವೃದ್ಧೆಯ ಪಿಗ್ಮಿ ಚೀಲದಲ್ಲಿದ್ದ ಹಣ ಪಡೆದು, ಕಿವಿಯಲ್ಲಿದ್ದ ಓಲೆಗಳನ್ನು ಕಳಚಿದ್ದಾನೆ, ಓಲೆ, ಕೈ ಬಳೆಗಳನ್ನು ಕಳಚಿ ಪರಾರಿಯಾಗುವಾಗ ಕಳ್ಳನ ಬಳಿ ಇದ್ದುದು ಒಂದು ಕಬ್ಬಣದ ರಾಡ್!

ಸ್ವಾಭಿಮಾನ, ಚಲದಿಂದ ಬದುಕುತಿದ್ದ ಸಭ್ಯ ವೃದ್ಧೆಯನ್ನು ಯಾಮಾರಿಸಿ ದಿನದ ಸಂಗ್ರಹದ ಪಿಗ್ಮಿಹಣದ ಜೊತೆಗೆ ಬಂಗಾರ ಕದಿಯಲು ಪ್ಲಾನ್‌ ಮಾಡಿದ್ದ ಅಭಿಜಿತ್‌ ಈ ವಿಚಾರವನ್ನು ತನ್ನ ಸಹಚರ ಪುಡುಂಗು ತಂಡಕ್ಕೂ ಹೇಳಿರಲಿಲ್ಲ.

ಪ್ರತಿದಿನ ಕುಡಿದು ಪೋಲಿಸುತ್ತುತ್ತಾ ಕರ್ಚಿನ ಕಾಸಿಗಾಗಿ ಕಳ್ಳತನ ಮಾಡುತಿದ್ದ ಅಭಿಜಿತ್‌ ತನ್ನ ಬೆಂಗಳೂರಿನ ಪುಂಡಾಟದ ನಂತರ ನಗರದ ಶಿಕ್ಷಕರ ಸಹಕಾರಿ ಬ್ಯಾಂಕ್‌ ನ ಕಳ್ಳತನ ಮಾಡಿದ್ದ, ಈ ಕಳ್ಳತನದಲ್ಲಿ ಒಂದೇ ಒಂದು ಫೂಟು ಅಳತೆಯ ಬಿಲ ಕೊರೆದು ಹೊರ ಬಂದಿದ್ದ ಅಭಿಜಿತ್‌ ನ ಕಳ್ಳತನದ ಚಾಲಾಕಿತನ ಈ ಪ್ರಕರಣದಲ್ಲಿ ಈತನ ಮೇಲೆ ಗುರಿ ಮಾಡಲು ಪ್ರಬಲ ಕಾರಣವಾಗಿತ್ತು.

ಕುಡಿತ, ಮೋಜು-ಮಜಾಕ್ಕಾಗಿ ಕಳ್ಳತನ, ರೌಡಿಜಂ ಮೊರೆಹೋಗಿದ್ದ ಅಭಿಜಿತ್‌ ಈಗ ಪೊಲೀಸರಿಗೆ ಸೆರೆಯಾಗಿದ್ದಾನೆ. ಈ ಪ್ರಕರಣದ ನಂತರ ಹೌಹಾರಿದಂತಾದ ಸಿದ್ಧಾಪುರದ ಪುಂಡರ ಬಳಗ ಈಗ ಮನೆ ಸೇರಿದೆ. ಯಾವ ತಪ್ಪು, ಪಾಪ ಮಾಡದ ಗೀತಮ್ಮ ಒಂದೇ ಉಸಿರಿಗೇ ಜೀವ ಬಿಟ್ಟಿದ್ದಾರೆ ಆದರೆ ಅವರ ಸಂಬಂಧಿಗಳ ವೇದನೆ ಮಾತ್ರ ಯಾರಿಗೂ ಅರ್ಥವಾಗಲು ಸಾಧ್ಯವಿಲ್ಲ. (ಸಶೇಶ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

ಬಿ.ಜೆ.ಪಿ. & ಕಾಂಗ್ರೆಸ್‌ ಗಳಿಂದ ತುಷ್ಟೀಕರಣದ ಸ್ಫರ್ಧೆ… ಕಾಂಗ್ರೆಸ್‌ ಬಸ್ಮಾಸುರ,ಬಿ.ಜೆ.ಪಿ. ಬಕಾಸುರ….

ಮುಸ್ಲಿಂ ಅಲ್ಪಸಂಖ್ಯಾತರನ್ನು ಒಲೈಸುವಲ್ಲಿ ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ ಗಳು ಸ್ಫರ್ಧೆ ನಡೆಸಿದ್ದು ಅಪಾಯಕಾರಿ ನಡೆಗಳಲ್ಲಿ ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಿಂತಿವೆ ಎಂದು...

ಬಹಿರಂಗ ಶುದ್ಧಿ ಜೊತೆಗೆ ಅಂತರಂಗ ಶುದ್ಧಿ ಮಹತ್ವ

ಸಿದ್ದಾಪುರದಲ್ಲಿ ಪವಿತ್ರ ರಂಜಾನ್ ಸಂಭ್ರಮಾಚರಣೆಸಿದ್ದಾಪುರ :31ಒಂದು ತಿಂಗಳ ಕಾಲ ಉಪವಾಸ ವ್ರತವನ್ನು ಆಚರಿಸಿದ ಮುಸ್ಲಿಮ್ ಬಾಂಧವರು ಪವಿತ್ರ ರಂಜಾನ್ (ಈದ್ ಉಲ್ ಫಿತ್ರ )ಹಬ್ಬವನ್ನು...

samajamukhi.net exclusive- ಇಂದು ಕರ್ನಾಟಕ….ಪತ್ರಕರ್ತ ವಿಶ್ವಾಮಿತ್ರ ಹೆಗಡೆ ವಿಧಿವಶ,ಶಿರಸಿಗೆ ಬಾರದ ಗೃಹಸಚಿವ,ಹಳದೋಟದಲ್ಲಿ ನಡೆಯಿತು ಸೇನಾವಿಧಿ!

ಶಿರಸಿಯ ಹಿರಿಯ ಪತ್ರಕರ್ತ ವಿಶ್ವಾಮಿತ್ರ ಹೆಗಡೆ ಭತ್ತಗುತ್ತಿಗೆ ಇಂದು ವಿಧಿವಶರಾಗಿದ್ದಾರೆ. ಪ್ರತಿಷ್ಠಿತ ಭತ್ತಗುತ್ತಿಗೆ ಕುಟುಂಬದ ವಿಶ್ವಾಮಿತ್ರ ಹೆಗಡೆ ಕನ್ನಡಪ್ರಭ,ವಿಶ್ವವಾಣಿ ಸೇರಿದಂತೆ ಕೆಲವು ಪತ್ರಿಕೆಗಳಲ್ಲಿ ಕೆಲಸಮಾಡಿದ್ದರು....

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *