

ಶಾಂತ, ಸಮೃದ್ಧ ಸಿದ್ಧಾಪುರದಲ್ಲಿ ಡಿ.೨೩ ರ ರಾತ್ರಿ ನಡೆದ ಕೊಲೆಪ್ರಕರಣ ಬೆಳಕಿಗೆ ಬಂದಿದ್ದು ೨೫ ರ ಮುಂಜಾನೆ. ಹಿಂದಿನ ದಿನದ ಹಾಲಿನ ಪಾಕೆಟ್ ಹೊರಗೆ ಬಿದ್ದದ್ದನ್ನು ಕಂಡು ಹಾಲು ಮಾರುವವ ಇತರರಿಗೆ ವಿಷಯ ತಿಳಿಸುತ್ತಾನೆ. ನಂತರ ಸಂಬಂಧಿಗಳು ಪೊಲೀಸರು ಸೇರಿ ಒಳ ಹೋದಾಗ ಪಿಗ್ಮಿ ಏಜೆಂಟ್ ಗೀತಾ ಸಾವನ್ನಪ್ಪಿರುವುದು ಗಮನಕ್ಕೆ ಬರುತ್ತದೆ.
ವಿಷಯ ತಿಳಿದ ಜನ ಸೊರಬಾ ರಸ್ತೆಯ ದೋಶೆಟ್ಟಿ ಚಾಳ್ ಬಳಿ ಸೇರತೊಡಗುತ್ತಾರೆ. ಹೀಗೆ ಹೆಣ (ಹತ್ಯೆ) ನೋಡಲು ಬಂದವರಲ್ಲಿ ಆರೋಪಿ ಅಭಿಜಿತ್ ಗಣಪತಿ ಮಡಿವಾಳ ಕೂಡಾ ಒಬ್ಬ.!
ಹಣ, ಬಂಗಾರ ದೋಚಿ ಕೊಲೆ ಮಾಡಿದ ಆಗಂತುಕರ ಶೋಧದಲ್ಲಿದ್ದಾಗ ಪೊಲೀಸರಿಗೆ ಮೊದಲು ಅನುಮಾನ ಬಂದಿದ್ದೇ ನೋಟೋರಿಯಸ್ ಅಭಿಜಿತ್ ಮಡಿವಾಳ ಬಗ್ಗೆ ಯಾಕೆಂದರೆ ತೀರ್ಥಳ್ಳಿ ಶಿಕ್ಷಕರ ಕೋಆಪರೇಟಿವ್ ಬ್ಯಾಂಕ್ ಕಳ್ಳತನದಲ್ಲಿ ಒಂದು ಅಡಿ ಸ್ಕ್ವಾರ್ ಸುತ್ತಳತೆ ಕೊರೆದು ಅದರಿಂದ ಹೊರ ಬಂದಿದ್ಧ ಕಳ್ಳ ಈ ಅಭಿಜಿತ್!
ಇಲ್ಲಿ ಒಂದು ಹೆಂಚು ಜಾರಿಸಿ ಆ ಪುಟ್ಟ ಜಾಗದಲ್ಲಿ ನುಸುಳಿ ಹೋಗಿ ಗೀತಮ್ಮನ ಸ್ನಾನದ ಕೋಣೆ ಬಳಿ ಕಳ್ಳತನಕ್ಕಾಗಿ ಹೊಂಚುಹಾಕಿ ಕಾದಿದ್ದ! ಈತ.
ಇದೇ ಅಭಿಜಿತ್ ಡಿ.೨೬ ರಂದು ಮುತ್ತೂಟ್ ಫೈನಾನ್ಸ್ ನಲ್ಲಿ ಅಡ ಇಟ್ಟಿದ್ದ ಚಿನ್ನದ ಓಲೆಗಳು ಗೀತಾ ಹುಂಡೇಕರ್ ಕಿವಿಯ ಓಲೆಗಳು ಕೊಲೆಯಾಗಿ ಪೊಲೀಸರ ಸೆರೆಗೆ ಸಿಗುವ ಮೊದಲು ಅಭಿಜಿತ್ ತನ್ನೂರಿನ ಕಾರ್ತಿಕದ ದಿನ ಅಡ ಇಟ್ಟ ಬಂಗಾರದ ಹಣ, ಪಿಗ್ಮಿ ಹಣದಲ್ಲಿ ಭರ್ಜರಿ ಪಾರ್ಟಿ ಮಾಡಿದ್ದ.
ಸಿದ್ಧಾಪುರದ ಪುಡಂಗು ತಂಡದ ಒಬ್ಬೊಬ್ಬ ಸದಸ್ಯರನ್ನು ಎತ್ತಿಕೊಂಡು ಹೋಗಿ ವಿಚಾರಣೆ ನಡೆಸುತಿದ್ದಾಗ ತನ್ನ ಮೇಲೆ ಅನುಮಾನವಿಲ್ಲ ಎಂದು ಅಭಿಜಿತ್ ಬಿಂದಾಸ್ ಓಡಾಡಿಕೊಂಡಿದ್ದ!
ವೈನ್ ಶಾಪ್ ಒ ಂದರಲ್ಲಿ ಗೀತಾ ಪಿಗ್ಮಿ ಪಡೆದು ಹೊರಟಾಗ ಅಲ್ಲಿ ದಂಡಿನೊಂದಿಗಿದ್ದ ಅಭಿಜಿತ್ ನಿಧಾನವಾಗಿ ಬೇರೆಯಾಗಿ ಒಳಮಾರ್ಗದಲ್ಲಿ ಹೋಗಿ ಗೀತಾಳ ಮನೆ ಸೇರಿ ಕೊಂಡಿದ್ದ.
ಪೊಲೀಸ್ ರಿಗೆ ಕೊಲೆಗಾರ ಕಳ್ಳನ ಬಗೆಗಿನ ಅನುಮಾನ ಖಾತ್ರಿಯಾಗುತ್ತಲೇ ಎದುರಿಗೆ ಬಂದ ಪೊಲೀಸರಿಗೆ ಅಮಾಯಕನ ತಲೆಗೆ ಕೊಲೆಯ ಆರೋಪ ಕಟ್ಟಬೇಡಿ ಕೋರ್ಟ್, ಜಡ್ಜ ಎದುರು ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಸಿದ್ದ ಕಳ್ಳ.!
ನುರಿತ ನಿಪುಣ ಕಳ್ಳ ಕೊನೆಗೆ ಆಗಿದ್ದನ್ನೆಲ್ಲಾ ವಿವರಿಸಿ ಅವಳನ್ನು ಕೊಲೆ ಮಾಡುವ ಉದ್ದೇಶ ತನ್ನದಿರಲಿಲ್ಲ ಹಣ-ಬಂಗಾರಕ್ಕಾಗಿ ಹೋದಾಗ ಕೂಗಿಕೊಂಡು ಬೇರೆಯವರಿಗೆ ತಿಳಿಯಬಾರದೆಂದು ಬಾಯಿ ಮತ್ತು ಗಂಟಲಿಗೆ ಬಟ್ಟೆಯಿಂದ ಬಲವಾಗಿ ಒತ್ತಿ ಹಿಡಿದಾಗ ಗೀತಾ ಸತ್ತಳು ಎನ್ನುವ ಸತ್ಯ ಹೇಳುವಾಗ ಅಭಿಜಿತ್ ಬೆಂಡಾಗಿದ್ದ….
ಅಮಾಯಕಿಯೊಬ್ಬಳ ಕೊಲೆ ವಿಚಾರ ಪೊಲೀಸರಿಗೆ ತಲೆ ನೋವು ತರಿಸಿತ್ತು, ಬೀರಗುಂಡಿ ಭೂತಪ್ಪ ನಮ್ಮನ್ನು ಕಾಪಾಡಪ್ಪ ಎಂದು ಪೊಲೀಸರು ಭೂತನ ಮೊರೆ ಹೋಗಿದ್ದರು! (ಸಶೇಶ)
