


ಸಿದ್ಧಾಪುರ,ಜ.೦೨- ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕಾನಗೋಡಿನ ಶ್ರೀ ಮಾರಿಕಾಂಬಾ ದೇವಾಲಯದ ಜಾತ್ರಾ ಮಹೋತ್ಸವ ಫೆ೧೧ರಿಂದ ೧೮ ರ ವರೆಗೆ ವಿಜೃಂಬಣೆಯಿಂದ ನಡೆಯಲಿದೆ.
ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ವಿವರ ನೀಡಿದ ಜಾತ್ರಾ ಸಮೀತಿ ಸದಸ್ಯರು ಈ ಬಗ್ಗೆ ವಿವರ ನೀಡಿ ಜಾತ್ರೆಯ ಹಂಗಾಮಿ ಅಂಗಡಿಗಳ ಜಾಗ ಲಿಲಾವು ಜ.೨೭ ರಂದು ನಡೆಯಲಿದ್ದು ಅಂಗಡಿ-ಮುಂಗಟ್ಟು ಖರೀದಿ ಮಾಡುವವರು, ಮಾರಿಕಾಂಬಾ ದೇವಿ ಭಜಕರಿಗೆ ಆಮಂತ್ರಣ ನೀಡಿದರು.
ಬೃಹತ್ ಕೆರೆಯ ಉಪಯೋಗ ಪಡೆದು ಜಲಕ್ರೀಡೆ, ಇತರ ಮನೋರಂಜನಾ ವ್ಯವಸ್ಥೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಜಾತ್ರೆ ಜನರನ್ನು ಆಕರ್ಷಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಇತರ ವಿವರಗಳಿಗೆ ಜಾತ್ರಾ ಸಮೇತಿ ಮತ್ತು ದೇವಾಲಯದ ಆಡಳಿತ ಸಮೀತಿ ಸದಸ್ಯರು, ಪದಾಧಿಕಾರಿಗಳನ್ನು ಸಂಪರ್ಕಿಸಲು ಕೋರಿದರು.
ಐದು ವರ್ಷಕ್ಕೊಮ್ಮೆ ನಡೆಯುವ ಕಾನಗೋಡು ಮಾರಿಕಾಂಬಾ ಜಾತ್ರೆ ಈ ವರ್ಷ ಏಳು ವರ್ಷಗಳ ನಂತರ ನಡೆಯುತ್ತಿದೆ. ಗ್ರಾಮದ ಮೂಲಭೂತ ಅನುಕೂಲಗಳು, ಜಾತ್ರೆಯ ಅಗತ್ಯ ಕೆಲಸಗಳಿಗೆ ಸ್ಫಂದಿಸುವ ಭರವಸೆ ಶಾಸಕರಿಂದ ದೊರೆತಿದೆ. ಶಾಸಕರ ಸಲಹೆ, ಮಾರ್ಗದರ್ಶನದ ಮೇರೆಗೆ ಅಧಿಕಾರಿಗಳ ಸಹಕಾರ ಪಡೆದು ಜಾತ್ರೆಯನ್ನು ಯಶಸ್ವಿ ಮಾಡುತ್ತೇವೆ.
– ಶಂಕರ ನಾಯ್ಕ, ಜಾತ್ರಾ ಸಮೀತಿ ಕಾರ್ಯದರ್ಶಿ
