



ಸಿದ್ಧಾಪುರ,ಜ.೧೨- ಇಲ್ಲಿಯ ಕಡಕೇರಿ ಮತ್ತು ಕಾನಳ್ಳಿ ಮೈದಾನಗಳಲ್ಲಿ ನಡೆದ ತಾಲೂಕಿನ ಸೌಹಾರ್ದ ಕ್ರಿಕೆಟ್ ಪಂದ್ಯಾಟದಲ್ಲಿ ಮಾಧ್ಯಮ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.


ತಾಲೂಕಾ ಪತ್ರಕರ್ತರ ಸಂಘ ಮತ್ತು ಮಾಧ್ಯಮ ಪ್ರತಿನಿಧಿಗಳ ಸಂಘಗಳ ಆಯೋಜನೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ಆಶ್ರಯದಲ್ಲಿ ನಡೆದ ಎರಡು ದಿನಗಳ ಈ ಪಂದ್ಯಾಟದಲ್ಲಿ ಒಟ್ಟೂ ಹತ್ತು ತಂಡಗಳು ಪಾಲ್ಗೊಂಡಿದ್ದವು.
ಟೀಚರ್ಸ್ ತಂಡ, ಮಾಧ್ಯಮ ತಂಡ, ಸಹಕಾರಿಸಂಘಗಳ ತಂಡಗಳು ಸೆಮಿ ಫೈನಲ್ ಪ್ರವೇಶಿಸಿದ್ದ ತಂಡಗಳಲ್ಲಿ ಅಂತಿಮವಾಗಿ ಮಾಧ್ಯಮ ತಂಡ ಮತ್ತು ಸಹಕಾರಿ ಸಂಘಗಳ ತಂಡಗಳ ನಡುವೆ ನಡೆದ ರೋಚಕ ಹಣಾಹಣಿಯಲ್ಲಿ ಮಾಧ್ಯಮ ತಂಡ ಜಯಿಸಿ, ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.
( ಈ ಪಂದ್ಯಾಟದ ಲೈವ್ ವಿಡಿಯೋ ಗಳು samaajamukhi.net fb page, samaajamukhi & samajamukhinews
youtube channels ಗಳಲ್ಲಿ ಲಭ್ಯವಿವೆ.)
