

ಸಿದ್ಧಾಪುರ ತಾಲೂಕಿನ ದೀವರ ಮಠ ತರಳಿಯಲ್ಲಿ ಪ್ರತಿವರ್ಷ ಶಿವರಾತ್ರಿಯಲ್ಲಿ ನಡೆಯುತಿದ್ದ ಸಾಮೂಹಿಕ ಸತ್ಯನಾರಾಯಣ ವೃತ ಈ ವರ್ಷ ನಡೆಯುತ್ತಿಲ್ಲ ಈ ಬಗ್ಗೆ ಇಂದು ಕರೆದ ಮಾಧ್ಯಮಗೋಷ್ಠಿಯಲ್ಲಿ ಈ ವಿಚಾರ ಪ್ರಕಟಿಸಿದ ತರಳಿ ಮಠದ ಟ್ರಸ್ಟ್ ಸಮೀತಿ ತಜ್ಞರ ಸಲಹೆಯಂತೆ ಈ ವರ್ಷ ಸತ್ಯನಾರಾಯಣ ವೃತವನ್ನು ಶಿವರಾತ್ರಿ ಬದಲು ಬೇರೆ ದಿನ ನಡೆಸಲು ತೀರ್ಮಾನಿಸಲಾಗಿದೆ. ಎಂದು ತಿಳಿಸಿದೆ.


ಈ ವರ್ಷದ ಶಿವರಾತ್ರಿಯಂದು ಶಿವಾಲಯದ ಪ್ರತಿಷ್ಠಾಪನೆ ನಡೆಯಲಿದೆ ಎಂದು ತಿಳಿಸಿದ ತರಳಿಮಠ ಟ್ರಸ್ಟ್ ಸಮೀತಿ ಅಧ್ಯಕ್ಷ ಎನ್.ಡಿ.ನಾಯ್ಕ ಐಸೂರು ಜ.೨೧ ರಂದು ದೇವಸ್ಥಾನದ ಶಿವ ಪ್ರತಿಮೆ ಮತ್ತು ನಂದಿ ಮೆರವಣಿಗೆ ಸಿದ್ಧಾಪುರದಲ್ಲಿ ನಡೆಯಲಿದ್ದು ಅಂದು ಸಮಾಜದ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ವಿನಂತಿಸಿದರು.

ಅಂದಾಜು ೫ ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣವಾಗಲಿರುವ ತರಳಿ ಮಠದ ಶಿವಾಲಯದ ಕಾಮಗಾರಿ ಭರದಿಂದ ಸಾಗುತ್ತಿದೆ ಎಂದು ವಿವರಿಸಿದರು.

