


ಪೊಲೀಸ್ ಹೆಡ್ ಕಾನ್ಸಟೇಬಲ್ ಮೇಲೆ ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿದ ದೂರಿನ ಮೇಲೆ ಶಿರಸಿ ಗಿಡಮಾವಿನಕಟ್ಟೆಯ ದರ್ಶನ್ ಗೌಡರ ಮೇಲೆ ಪ್ರಕರಣ ದಾಖಲಿಸಿ, ಬಂಧಿಸಿದ ಘಟನೆ ಸಿದ್ದಾಪುರದಲ್ಲಿನಡೆದಿದೆ.

ಆರೋಪಿ ಕರಿಇಡ್ಲಿ ಯಾನೆ ದರ್ಶನ್ ಗೌಡ ಸಿದ್ಧಾಪುರ ಮುಖ್ಯರಸ್ತೆಯ ಏಕಮುಖ ಸಂಚಾರದ ರಸ್ತೆಯಲ್ಲಿ ಕಾನೂನು ನಿರ್ಲಕ್ಷಿಸಿ ಬರುತಿದ್ದಾಗ ಪ್ರಶ್ನಿಸಿದ ಮುಖ್ಯಪೇದೆ ದೇವರಾಜ್ ನಾಯ್ಕ ಮೇಲೆ ಏರಿ ಹೋಗಿ ಹಲ್ಲೆಮಾಡಿ ಕೊಲೆಬೆದರಿಕೆ ಹಾಕಿದ. ಈ ಸಂದರ್ಭದಲ್ಲಿ ಸೇರಿದ ಸಾರ್ವಜನಿಕರು ದರ್ಶನ್ ಗೌಡನನ್ನು ಹಿಡಿದು ಪೊಲೀಸ್ ವಶಕ್ಕೆ ಕೊಟ್ಟರು. ಬಣ್ಣ ಬಳಿಯುವ ಕೆಲಸಮಾಡುವ ದರ್ಶನ್ ಗೌಡ ಕಳ್ಳತನ, ದಾಂಧಲೆ ಸೇರಿದಂತೆ ಕಾನೂನು ಬಾಹೀರ ಚಟುವಟಿಕೆ ಮಾಡಿ ಪೊಲೀಸರಿಗೆ ಬೇಕಾಗಿದ್ದ ಆರೋಪಿ ಎನ್ನಲಾಗಿದೆ.


ಕೊಲೆ ಆರೋಪಿ ಅಭಿಜಿತ್, ಅಯ್ಯಪ್ಪ ಜಾತ್ರೆಯ ಅಪಘಾತದ ಆರೋಪಿ ರೋಶನ್, ಈಗ ದರ್ಶನ್ ಗೌಡ ಇವರೆಲ್ಲಾ ಕಾನೂನು ಬಾಹೀರ ಕೆಲಸ ಮಾಡಿ ಪೊಲೀಸರ ವಿರುದ್ಧವೇ ಎಗರಾಡಿ ಸುದ್ದಿ ಮಾಡಿರುವುದರಿಂದ ಈ ಆರೋಪಿ ಮೇಲೆ ಪೊಲೀಸ್ ಪವರ್ ಪ್ರಯೋಗವಾಗಿರುವ ಬಗ್ಗೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.
