



ಸಿದ್ಧಾಪುರದ ಬೀರಗುಂಡಿ ಭೂತಪ್ಪ ಪವರ್ಫುಲ್ ದೇವರು, ಈ ದೇವರಿಗೆ ಪೊಲೀಸರೇ ಜಾತ್ರೆ ಮಾಡುತ್ತಾರೆ ಸ್ಥಳೀಯರೊಂದಿಗೆ ಸರ್ಕಾರಿ ನೌಕರರೇ ಹರಕೆ ಹೊರುತ್ತಾರೆ. ಯಾಕಪ್ಪ ಎಂದರೆ ಅದಕ್ಕೆ ಒಂದು ಕತೆ ಇದೆ. ತನ್ನ ಮೂಲ ಜಾಗವನ್ನು ಕಂದಾಯ ಮತ್ತು ಪೊಲೀಸ್ ಇಲಾಖೆಗಳಿಗೆ ಬಿಟ್ಟುಕೊಟ್ಟ ಭೂತಪ್ಪ ಈಗ ತಾನಿರುವ ಜಾಗದಲ್ಲಿ ಪೊಲೀಸರಿಂದ ಜಾತ್ರೆ, ಪೂಜೆ, ಹರಕೆಯ ಸೇವೆ ಪಡೆಯುತ್ತಾನೆ. ಈ ಭೂತಪ್ಪ ನೌಕರರನ್ನು ರಕ್ಷಿಸುತ್ತಾನೆ. ಪೊಲೀಸರಿಗೆ ಕಳ್ಳರು, ಕೊಲೆಗಾರರನ್ನು ಹಿಡಿಯಲು ನೆರವಾಗುತ್ತಾನೆ ಎಂದು ನಂಬಿಕೆ ಇದೆ. ಈ ವಿಶ್ವಾದಲ್ಲಿರುವ ಪೊಲೀಸರು ದೇವರಿಗೆ ಬೆಳ್ಳಿ ಕವಚ ತೊಡಿಸುವುದು ಸೇರಿದಂತೆ ಇತರ ಸೇವೆ ಸಲ್ಲಿಸಿ ಪುನೀತರಾಗುತ್ತಾರೆ. (ಇಲ್ಲಿರುವ ವಿಡಿಯೋ ಸುದ್ದಿಗಳನ್ನು ನೋಡಿ)



