




ಸಿದ್ದಾಪುರ: ಭತ್ತದ ಹುಲ್ಲು ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ
ಆಕಸ್ಮಿಕ ಬೆಂಕಿ ತಗುಲಿ ಹುಲ್ಲು ಸಂಪೂರ್ಣ ಭಸ್ಮ ವಾದ ಘಟನೆ ತಾಲೂಕಿನ ಕುಂಬ್ರಿಗದ್ದೆ ಬಸ್ ತಂಗುದಾಣದ ಬಳಿ ಶನಿವಾರ ನಡೆದಿದೆ.

ಸಿದ್ದಾಪುರ-ಕುಮಟಾ ರಾಜ್ಯ ಹೆದ್ದಾರಿಯ ಕುಂಬ್ರಿಗದ್ದೆ ಬಸ್ ಸ್ಟ್ಯಾಂಡ್ ಬಳಿ ಹುಲ್ಲಿನ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಹೋಗಿದೆ. ಸಿದ್ದಾಪುರ ಕಡೆಯಿಂದ ದೊಡ್ಮನೆ ಕಡೆಗೆ ಸಾಗುತ್ತಿದ್ದ ತಾಲ್ಲೂಕಿನ ಬೀರಲಮಕ್ಕಿ ಸಮೀಪದ ಉಡಳ್ಳಿಯ ಮಂಜುನಾಥ ಎಂಬುವವರಿಗೆ ಸೇರಿದ ಹುಲ್ಲಿನ ಲಾರಿಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹತ್ತಿಕೊಂಡಿದೆ. ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸೇರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದರಿಂದಾಗಿ ಸುಮಾರು ಮುಕ್ಕಾಲು ಗಂಟೆ ಕಾಲ ಸಿದ್ದಾಪುರ ಕುಮಟಾ ಮುಖ್ಯರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.
ಘಟನೆ ನಡೆದ ಸ್ವಲ್ಪ ಸಮಯದಲ್ಲೇ ಸ್ಥಳೀಯ ಅಗ್ನಿಶಾಮಕ ದಳ ಸ್ಥಳಕ್ಕೆ ಬಂದರೂ ಸಾಕಷ್ಟು ನೀರಿನ ದಾಸ್ತಾಸು ಇಲ್ಲದೆ ಪರದಾಡುವಂತಾಯಿತು. ನಂತರ ಸಾರ್ವಜನಿಕರ ಸಹಾಯದಿಂದ ಸಮೀಪದಲ್ಲಿ ಇರುವ ಮನೆಯ ನೀರನ್ನು ಬಳಸಿ ಬೆಂಕಿ ನಂದಿಸಲಾಗಿದೆ. ಅವೈ ಜ್ಞಾನಿಕವಾಗಿ ವಿದ್ಯುತ್ ಲೈನ್ ಎಳೆದಿದ್ದೇ ಇದಕ್ಕೆ ಕಾರಣ ಎಂದು ಆರೋಪ ವ್ಯಕ್ತವಾಗಿದೆ.

https://samajamukhi.net/2025/01/25/%


