


ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ವಿಶೇಷ ಅತಿಥಿಗಳಾಗಿ ಚಿತ್ತಾರ ಕಲಾವಿದ ದಂಪತಿಗಳಿಗೆ ಅಹ್ವಾನ
ಸಿದ್ದಾಪುರ: ನಾಳೆ ರವಿವಾರ ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ-2025 ಕ್ಕೆ ನಾಡಿನ ಹೆಸರಾಂತ ಚಿತ್ತಾರ ಕಲಾವಿದ ದಂಪತಿಗಳಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಈಶ್ವರ ನಾಯ್ಕ ಹಸುವಂತೆ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಸರಸ್ವತಿ ಈಶ್ವರ ನಾಯ್ಕ ರನ್ನು ರಾಷ್ಟ್ರಪತಿಗಳ ಭವನದಿಂದ ವಿಶೇಷವಾಗಿ ಆಹ್ವಾನಿಸಿದ ಮಾಹಿತಿಯನ್ನು ನೀಡಿದ್ದಾರೆ.

ಇದು ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳ ಕೃಷಿ ಪರಂಪರೆಯ ಜೀವನಾಡಿಯಾದ ವೈಶಿಷ್ಟ್ಯ ಪೂರ್ಣ ಕರಕುಶಲ ಹಸೆ ಚಿತ್ತಾರ ಕಲಾವಿದರಿಗೆ ಸಲ್ಲುವ ಆಹ್ವಾನವೆಂದು ಭಾವಿಸಿ ಅತ್ಯಂತ ಸಂತೋಷದಿಂದ ಭಾಗವಹಿಸುವುದಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಈಶ್ವರ ನಾಯ್ಕ ಹಸುವಂತೆ ತಿಳಿಸಿದ್ದಾರೆ.
ಈ ಸಾಧಕರಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗು ಶಾಸಕ ಭೀಮಣ್ಣ ಟಿ ನಾಯ್ಕ ಸೇರಿದಂತೆ ವಿವಿಧ ಸಂಘಸಂಸ್ಥೆಗಳಿಂದ ಪ್ರಶಂಸೆ ವ್ಯಕ್ತವಾಗಿದೆ.

