



https://www.facebook.com/samaajamukhi.net/videos/504909865948518
ಅಂಕೋಲ ತಾಲೂಕಿನ ರಾಮಗುಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೋಲಿಸರಿಗೆ ಸಿಕ್ಕ ಕಾರಿನಲ್ಲಿ ಸುಮಾರು 1.14 ಕೋಟಿ ರೂ ನಗದು ಪತ್ತೆಯಾಗಿರುವುದು ಹಲವು ಬಗೆಯ ಸಂಶಯಕ್ಕೆ ಕಾರಣವಾಗಿದೆ.

ಈ ಕಾರಿನ ಮುಂದಿನ ಗಾಜು ಒಡೆದು ಸೀಟು ಚೆಲ್ಲಾಪಿಲ್ಲಿಯಾಗಿ ಹರಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಈ ಕಾರನ್ನು ವಶಕ್ಕೆ ಪಡೆದ ಪೋಲಿಸರು ಸಂಪೂರ್ಣವಾಗಿ ತಪಾಸಣೆ ನಡೆಸಿದಾಗ ಕಾರಿನ ಹಿಂಬದಿಯ ಸೀಟಿನಲ್ಲಿ ಕೆಳಭಾಗದ ಲಾಕರನಲ್ಲಿ ಇಷ್ಟೊಂದು ಮೊತ್ತದ ಹಣ ಪತ್ತೆಯಾಗಿದೆ. ಎಸ್ಪಿ ನಾರಾಯಣ ಎಂ ಮಾರ್ಗದರ್ಶನ,ಡಿವಾಯಸ್ಪಿ ಎಸ್ ವಿ ಗಿರೀಶ ನೇತ್ರತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಿಪಿಆಯ್ ಚಂದ್ರಶೇಖರ ಮಠಪತಿ,ಪಿ ಎಸ್ ಆಯ್ ಗಳಾದ ಉದ್ದಪ್ಪ ಧರೆಪ್ಪನವರ್,ಸುನೀಲ ಹುಲ್ಲೊಳ್ಳಿ ಎ ಎಸ್ ಆಯ್ ರಿತೇಶ ನಾಗೇಕರ್ ಇತರರಿದ್ದರು.


