


ಉಪವಿಭಾಗಾಧಿಕಾರಿಗಳ ನೇತೃತ್ವ ಮತ್ತು ಅಧ್ಯಕ್ಷತೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅರ್ಜಿಗಳ ಪುನರ್ ಪರಿಶೀಲನೆ ಕೆಲಸವನ್ನು ಜಿಲ್ಲಾಡಳಿತ ಕಾಟಾಚಾರದ ಕೆಲಸವೆಂಬಂತೆ ನಿರ್ವಹಿಸುತ್ತಿರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾಗುತ್ತಿವೆ.

೨೦೦೫-೬ರ ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಪಾರಂಪರಿಕ ಅರಣ್ಯ ವಾಸಿಗಳ ಕಾಯಿದೆ ಜಾರಿಗೆ ಗ್ರಾಮ ಮಟ್ಟ ಮತ್ತು ಉಪವಿಭಾಗಮಟ್ಟಗಳಲ್ಲಿ ಅತಿಕ್ರಮಣದಾರರ ಅರ್ಜಿ ಸ್ವೀಕರಿಸಿ ಅವೈಜ್ಞಾನಿಕವಾಗಿ ತಿಸ್ಕರಿಸಲಾಗಿತ್ತು. ಈ ಬಗ್ಗೆ ಅರ್ಜಿ ಪುನರ್ ಪರಿಶೀಲನೆಯ ಪ್ರಕ್ರೀಯೆ ಉತ್ತರ ಕನ್ನಡ ಜಿಲ್ಲೆಯ ಉಪವಿಭಾಗಗಳ ಹಂತಗಳಲ್ಲಿ ನಡೆಯುತ್ತಿದೆ. ಈ ಪ್ರಕ್ರೀಯೆ ಅವೈಜ್ಞಾನಿಕ ಮತ್ತು ಕಾನೂನು ಬಾಹೀರ ಎನ್ನುವ ಚರ್ಚೆಗಳು ನಡೆಯುತಿದ್ದು ಅರ್ಜಿದಾರರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಸಾಮಾನ್ಯವಾಗಿದೆ.

ಉಪವಿಭಾಗೀಯ ಮಟ್ಟದಲ್ಲಿ ಸಹಾಯಕ ಆಯುಕ್ತರು,ಗ್ರಾಮ ಮಟ್ಟದಲ್ಲಿ ಪಿ.ಡಿ.ಒ ಗಳು ಈ ಪ್ರಕ್ರಿಯೆ ನಡೆಸುತ್ತಿರುವ ಬಗ್ಗೆ ಮಾಹಿತಿಗಳಿವೆ. ಆದರೆ ಗ್ರಾಮ ಸಮೀತಿ ಮತ್ತು ಉಪವಿಭಾಗೀಯ ಸಮೀತಿ ಮಟ್ಟಗಳಲ್ಲಿ ಈಗ ಸಮೀತಿಗಳು ಅಸ್ಥಿತ್ವದಲ್ಲಿಲ್ಲ ಚುನಾಯಿತ| ನಾಮನಿರ್ಧೇಶಿತ ಸದಸ್ಯರ ಅನುಪಸ್ಥಿತಿಯಲ್ಲಿ ಆಯಾ ಹಂತಗಳ ಅರ್ಜಿ ಪುನರ್ ಪರಿಶೀಲನೆ ಎಷ್ಡು ಸರಿ ಎಂದು ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮೀತಿ ಆಕ್ಷೇಪಿಸಿದೆ.

ಈ ಬಗ್ಗೆ ಕಾನೂನು ಕ್ರಮಕ್ಕೆ ಮುಂದಾಗಿರುವ ಅರಣ್ಯ ಭೂಮಿ ಸಾಗುವಳಿ ಹಕ್ಕು ಹೋರಾಟ ವೇದಿಕೆ ಅಧ್ಯಕ್ಷ ಎ. ರವೀಂದ್ರ ಮುಖ್ಯಮಂತ್ರಿಗಳ ವರೆಗೆ ಸಮಗ್ರ ಮಾಹಿತಿ ನೀಡಿದ ಬಳಿಕ ಈಗ ಮತ್ತೆ ಈ ಪ್ರಕ್ರೀಯೆಗೆ ಚಾಲನೆ ದೊರೆತಿದೆ. ವಾಸ್ತವದಲ್ಲಿ ಹಿಂದೆ ಅವೈಜ್ಷಾನಿಕವಾಗಿ ಅರಣ್ಯ ಭೂಮಿ ಅತಿಕ್ರಮಣದಾರರ ಅರ್ಜಿ ಪಡೆದು ತಿರಸ್ಕರಿಸಲಾಗಿತ್ತು. ಈಗ ಅದೇ ಮಾದರಿಯಲ್ಲಿ ತರಾತುರಿಯಲ್ಲಿ ಪರಿಶೀಲನೆ ನಡೆಯುತ್ತಿದೆ. ಗ್ರಾಮ ಸಮೀತಿ, ಉಪವಿಭಾಗೀಯ ಸಮೀತಿಗಳು ಈಗ ಅಸ್ಥಿತ್ವದಲ್ಲೇ ಇಲ್ಲ ಇಂಥ ಸಮೀತಿಗಳ ಸದಸ್ಯರೂ ಕೂಡಾ ಪುರ್ಣಪ್ರಮಾಣದಲ್ಲಿಲ್ಲ ಈ ಸ್ಥಿತಿಯಲ್ಲಿ ಮತ್ತೆ ಕಾಟಾಚಾರಕ್ಕೆ ಅರ್ಜಿ ಪರಿಶೀಲನೆ, ಇತ್ಯಾದಿ ಮಾಡಿದರೆ ಅತಿಕ್ರಮಿತ ಮುಗ್ಧ ಬಡವರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಕಾನೂನು ಹೋರಾಟಕೂಡಾ ಮಾಡುತಿದ್ದೇವೆ. ಈ ಪ್ರಕ್ರೀಯೆಗೆ ೫೦ ಸಾವಿರ ಜನರ ಆಕ್ಷೇಪವನ್ನೂ ದಾಖಲಿಸಿರುವುದಾಗಿ ತಿಳಿಸಿದರು.
ಮೂರು ತಲೆಮಾರು ಅಥವಾ ೭೦ ವರ್ಷ ೧೯೩೦ ರ ಒಳಗೆ ಈ ನಿಯಮಗಳೆಲ್ಲಾ ಅಧಿನಿಯಮದಲ್ಲೇ ಇಲ್ಲ ಇಂಥ ಕಾಟಾಚಾರದ ಕೆಲಸದಿಂದ ಜನರಿಗೆ ಅನುಕೂಲವಾಗುವುದಕ್ಕಿಂತ ತೊಂದರೆ ಆಗುವುದೇ ಹೆಚ್ಚು ಈ ಬಗ್ಗೆ ಶಾಸಕರು, ಸಚಿವರು ಮಾತನಾಡದಿರುವುದು, ಸರ್ಕಾರದ ಗಮನಕ್ಕೆ ತಂದು ಸರಿಪಡಿಸದಿರುವುದು ಸರಿಯಲ್ಲ ಎಂದು ವಿವರಿಸಿದರು.
ಮೂವತ್ತು ವರ್ಷಗಳಿಂದ ಆಡಳಿತ ಮಾಡಿ ಅಧಿಕಾರ, ಅನುಕೂಲ ಅನುಭವಿಸಿದವರು ಈ ಬಗ್ಗೆ ಮಾತನಾಡುವುದೇ ಇಲ್ಲ. ಅವರ ಹಿತಾಸಕ್ತಿ ಅವರ ಮಾತು, ನಡವಳಿಕೆಗಳಿಂದ ಪ್ರತಿಬಿಂಬವಾಗುತ್ತಿದೆ. ಜವಾಬ್ಧಾರಿ ಸ್ಥಾನದಲ್ಲಿರುವವರು ಸರಿಯಾಗಿ ವರ್ತಿಸಿದರೆ ಉತ್ತರ ಕನ್ನಡ ಜಿಲ್ಲೆಗೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಬೇಸರಿಸಿದರು.

ಸಿದ್ದಾಪುರ ಕಾನಳ್ಳಿಯಲ್ಲಿ ಅಂಗನವಾಡಿ ಸಹಾಯಕಿ ನೇಮಕಕ್ಕೆ ಸಂಬಂಧಿಸಿದವರಿಗೆ ಮನವಿ ನೀಡಲಾಯಿತು.

ಇಂದು ಸಿದ್ಧಾಪುರದಲ್ಲಿ ಶಿರಸಿ ಉಪವಿಭಾಗಾಧಿಕಾರಿ ಕಾವ್ಯಾರಾಣಿ ನೇತೃತ್ವದಲ್ಲಿ ಅರಣ್ಯ ಹಕ್ಕು ಅಧಿನಿಯಮದ ತಿರಸ್ಕೃತ ಅರ್ಜಿಗಳ ಪುನರ್ ಪರಿಶೀಲನೆ ನಡೆಯಿತು. ೨೦೦ ಜನರಿಗೆ ಒಂದು ಗಂಟೆಯ ಅವಧಿಯಲ್ಲಿ ಅಹವಾಲು ಆಲಿಸಿದ ಸಮೀತಿ ನಡೆಸಿರುವ ಪರಿಶೀಲನೆ ಅವೈಜ್ಞಾನಿಕ, ಕಾನೂನು ಬಾಹೀರ ಎನ್ನಲಾಗಿದೆ. ನೋಟೀಸ್ ನೀಡಿ ಅರ್ಜಿದಾರರು ಬರುವುದರೊಳಗೆ ಪರಿಶೀಲನೆ ಬರಕಾಸ್ತು ಮಾಡಿರುವ ಬಗ್ಗೆ ಹಲವರು ಸಮಾಜಮುಖಿ ಡಾಟ್ ನೆಟ್ ಪ್ರತಿನಿಧಿಗೆ ದೂರಿದರು.

