



ಸಮಾನತೆ, ಸಹಿಷ್ಣುತೆ,ಸೌಹಾರ್ದತೆಯಿಂದ ಎಲ್ಲರೊಳಗೊಂದಾಗಿ ಬಾಳುವ ಜಾತ್ಯಾತೀತತೆ ಅಳವಡಿಸಿಕೊಂಡರೆ ನಾವು ಮಡಿವಾಳ ಮಾಚಿದೇವರನ್ನು ಗೌರವಿಸಿದಂತೆ ಎಂದು ಕೋಲಶಿರ್ಸಿ ಪ.ಪೂ. ಕಾಲೇಜಿನ ಉಪನ್ಯಾಸಕ ಮಂಜಪ್ಪ ಎಂ.ಜಿ. ಹೇಳಿದರು. ಅವರು ಸಿದ್ಧಾಪುರ ತಹಸಿಲ್ಧಾರರ ಕಛೇರಿ ಸಭಾಂಗಣದಲ್ಲಿ ತಾಲೂಕಾ ಆಡಳಿತ ಮತ್ತು ತಾಲೂಕಾ ಮಡಿವಾಳ ಸಮಾಜದ ಸಂಘ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ವಿಶೇಶ ಉಪನ್ಯಾಸ ನೀಡಿದರು. ಈ ಜಯಂತಿ ಅಂಗವಾಗಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ತಾ.ಪಂ. ಕಾ.ನಿ.ಅ. ದೇವರಾಜ್ ಹಿತ್ತಲಕೊಪ್ಪ ಮಾತನಾಡಿ ಎಲ್ಲಾ ಸಮಾಜದವರನ್ನೂ ಒಗ್ಗೂಡಿಸಿ ಮಾಡುವ ಇಂಥ ಕಾರ್ಯಕ್ರಮಗಳಿಂದ ಪರಸ್ಪರರು ಸಮಾಜದ ಗುರುಗಳ ಬಗ್ಗೆ ಅರಿಯಲು ಸಾಧ್ಯ ಇದರಿಂದ ಸೌಹಾರ್ದತೆ ಹೆಚ್ಚುತ್ತದೆ ಎಂದು ಪ್ರತಿಪಾದಿಸಿದರು.

ನಾಮಧಾರಿ ಸಮಾಜದ ಪರವಾಗಿ ಸನ್ಮಾನ ಸ್ವೀಕರಿಸಿದ ತಾಲೂಕಾ ಗ್ಯಾರಂಟಿ ಅನುಷ್ಠಾನ ಸಮೀತಿ ಅಧ್ಯಕ್ಷ ನಾಗರಾಜ್ ಕೆ.ಜಿ. ಮಾತನಾಡಿ ವಚನಗಳ ಸಂರಕ್ಷಣೆ ಮೂಲಕ ಬಸವಣ್ಣನ ಜ್ಞಾನಭಂಡಾರ ಉಳಿಸಿ ಕೊಟ್ಟ ಮಡಿವಾಳ ಮಾಚಿದೇವ ಇತರ ಸಮಾಜಕ್ಕೂ ಮಾದರಿ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತಹಸಿಲ್ಧಾರ ಎಂ.ಆರ್. ಕುಲಕರ್ಣಿ ಸಮಾನತೆ, ಮೌಢ್ಯ ವಿರೋಧಕ್ಕಾಗಿ ಬದುಕನ್ನೇ ಪಣಕ್ಕಿಟ್ಟ ಮಡಿವಾಳ ಮಾಚಿದೇವ ಪವಾಡಪುರುಷ ಎಂದರು.

ತಾಲೂಕಾ ಮಡಿವಾಳ ಸಮಾಜದ ಅಧ್ಯಕ್ಷ ಪಿ.ಬಿ.ಹೊಸೂರು ಅಧ್ಯಕ್ಷತೆ ವಹಿಸಿದ್ದರು. ಸಂಗೀತಾ ಭಟ್ಟ ಸ್ವಾಗತಿಸಿದರು. ಗ್ರೇಡ್ ೨ ತಹಸಿಲ್ಧಾರ ಶ್ಯಾಮಸುಂದರ್ ಜಿ.ಎಲ್. ನಿರೂಪಿಸಿದರು. ಕೃಷ್ಣಮೂರ್ತಿ ಕಡಕೇರಿ, ವಿಶ್ವಗೌಡ ಇಟಗಿ, ಕೆ.ಟಿ. ಹೊನ್ನೆಗುಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


