


ಸವಿತಾ ಸಮಾಜ ಇಂದು ಒಂದೇ ವೃತ್ತಿಗೆ ಅಂಟಿಕೊಳ್ಳದೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು ಈ ಸಮಾಜ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ತನ್ನ ಅಭಿವೃದ್ಧಿಗೆ ಪೂರಕ ಮಾಡಿಕೊಳ್ಳಬೇಕು ಎಂದು ತಹಸಿಲ್ಧಾರ ಎಂ.ಆರ್. ಕುಲಕರ್ಣಿ ಹೇಳಿದರು. ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸವಿತಾ ಮಹರ್ಷಿಗಳೇ ಈ ಸಮಾಜಕ್ಕೆ ಮಾರ್ಗದರ್ಶಿ ಎಂದರು.

ಸಿದ್ಧಾಪುರ ನಗರದ ರಾಘವೇಂದ್ರ ಮಠದಲ್ಲಿ ಸವಿತಾ ಸಮಾಜ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಆಚರಣೆ ಅಂಗವಾಗಿ ಸಮಾಜದ ಪ್ರತಿಭಾವಂತ ಮಕ್ಕಳನ್ನು ಅಭಿನಂದಿಸಿ ಉತ್ತೇಜಿಸಲಾಯಿತು.

ಸವಿತಾ ಸಮಾಜದ ಹಿನ್ನೆಲೆ ಬಗ್ಗೆ ಚಂದ್ರಶೇಖರ್ ಕೊಡಿಯಾ ಮಾತನಾಡಿದರು. ಸವಿತಾ ಸಮಾಜದ ಶಿಕ್ಷಣದ ಬಗ್ಗೆ ಗಣೇಶ ಕೊಡಿಯಾ ಮಾತನಾಡಿದರು. ಉಮೇಶ್ ತೇಲಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

