



ಫೆ.೮,೯ರ ಶನಿವಾರ & ರವಿವಾರ ಸಿದ್ದಾಪುರ ಉತ್ಸವ ೨೦೨೫ ನಡೆಯಲಿದೆ. ಶನಿವಾರ, ರವಿವಾರ ಹಗಲು ಕ್ರೀಡಾ ಚಟುವಟಿಕೆಗಳು,ಸಾಯಂಕಾಲ ಸಾಂಸ್ಕೃತಿಕ ಚಟುವಟಿಕೆಗಳು ಇವುಗಳ ನಡುವೆ ರಾತ್ರಿ ಸಭಾ ಕಾರ್ಯಕ್ರಮಗಳು ನಡೆಯಲಿವೆ.


ಫೆ.೮ ರ ಶನಿವಾರ ಸಾಯಂಕಾಲ೭.೩೦ ಕ್ಕೆ ಸಿದ್ಧಾಪುರ ಉತ್ಸವ ೨೫ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಈ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ಕನ್ಯಾಡಿ ಶ್ರೀರಾಮ ಕ್ಷೇತ್ರದ ಸದ್ಘುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ವಹಿಸಲಿದ್ದಾರೆ.


ಸಿದ್ಧಾಪುರ ಉತ್ಸವ ಸಮೀತಿ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜಿಬೈಲ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭಾ ಕಾರ್ಯಕ್ರಮದಲ್ಲಿ ಶಿರಸಿ ಜೀವಜಲ ಕಾರ್ಯಪಡೆಯ ಶ್ರೀನಿವಾಸ ಹೆಬ್ಬಾರ್ ಮಾಜಿ ಶಾಸಕಿ ರೂಪಾಲಿ ನಾಯ್ಕ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.


ಈ ಉತ್ಸವಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಶಾಸಕ ಭೀಮಣ್ಣ ನಾಯ್ಕ ಜಂಟಿಯಾಗಿ ಚಾಲನೆ ನೀಡಲಿದ್ದಾರೆ.
ಮಾರನೇ ದಿನ ರವಿವಾರ ಸಾಯಂಕಾಲ ಸಮಾರೋಪ & ಸಾಧಕರಿಗೆ ಸನ್ಮಾನ ನಡೆಯಲಿದ್ದು ಈ ಸಭಾ ಕಾರ್ಯಕ್ರಮಕ್ಕೆಉತ್ಸವ ಸಮೀತಿ ಗೌರವಾಧ್ಯಕ್ಷ ಉಪೇಂದ್ರ ಪೈ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಸಕ ಭೀಮಣ್ಣ ನಾಯ್ಕ, ಮಾಜಿ ಸಚಿವ ಹರತಾಳು ಹಾಲಪ್ಪ ಹಾಗೂ ಅತಿಥಿಗಳಾಗಿ ಡಾ.ಶ್ರೀಧರ ವೈದ್ಯ & ಡಾ. ಶಶಿಭೂಷಣ ಹೆಗಡೆ ಪಾಲ್ಗೊಳ್ಳಲಿದ್ದಾರೆ.
ಎರಡು ದಿವಸ ರಾತ್ರಿ ಖ್ಯಾತ ಕಲಾವಿದರ ತಂಡಗಳಿಂದ ಸಂಗೀತ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.

