


ದುಡಿಯುವ ವರ್ಗದ ಜನರೇ ಅಧಿಕವಾಗಿರುವ ಸಿದ್ದಾಪುರ ಕಾನಗೋಡಿನ ಮಾರಿಕಾಂಬಾ ಜಾತ್ರೆ ಈ ವಾರ ನಡೆಯಲಿದೆ. ಸಂಸದರ ಮಾದರಿ ಗ್ರಾಮ ಎನ್ನುವ ಆರೋಪವಿರುವ ಕಾನಗೋಡಿನ ರಸ್ತೆಗಳು ಎಷ್ಟೋ ವರ್ಷಗಳ ನಂತರ ಅಭಿವೃದ್ಧಿ ಕಂಡಿವೆ.

ಗ್ರಾಮ ಪಂಚಾಯತ್ ಆಡಳಿತ, ಕಾನಗೋಡು ವಿ.ಎಸ್.ಎಸ್. ಚೇತರಿಕೆ, ಕೆರೆಯ ಅಭಿವೃದ್ಧಿ, ದೇವಸ್ಥಾನ ನಿರ್ಮಾಣ ಹೀಗೆ ಬಹುವೇಶಿಷ್ಟ್ಯದ ಈ ಗ್ರಾಮದ ಜನರು ಪೂರ್ತಿ ಒಂದು ವಾರ ಮಾರಿಕಾಂಬಾ ಜಾತ್ರೆಯ ಮಾಂಸದೂಟದ ಸಂಬ್ರಮ ಆಚರಿಸಲಿದ್ದಾರೆ. ಗ್ರಾಮದ ಸಾಧಕರು, ನಗರಗಳಲ್ಲಿ ಬೀಡುಬಿಟ್ಟಿರುವ ಕಾನಗೋಡು ಮೂಲದ ನಗರವಾಸಿಗಳು, ಗ್ರಾಮದಿಂದ ಹೊರಗಿದ್ದವರು ಈ ಜಾತ್ರೆಗೆ ಬಂದು ಹುಟ್ಟೂರಿನ ಸಂಬ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.




