


ಸಿದ್ದಾಪುರ, ಮೂರನೇ ವರ್ಷದ ಸಿದ್ಧಾಪುರ ಉತ್ಸವ ೨೦೨೫ ಹಲವು ರಗಳೆಗಳ ನಡುವೆ ಅದ್ಧೂರಿಯಾಗಿ ಪ್ರಾರಂಭವಾಯಿತು. ಸಿದ್ಧಾಪುರ ಉತ್ಸವ ೨೫ ರ ರೂಪರೇಷೆ ಸಿದ್ಧವಾಗುವವರೆಗೆ ಆರೋಗ್ಯಕರವಾಗಿದ್ದ ಸಿದ್ದಾಪುರ ಉತ್ಸವ ಸಮೀತಿ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜಿಬೈಲ್ ರ ಅನಾರೋಗ್ಯ ಸಿದ್ಧಾಪುರ ಉತ್ಸವ ಆಚರಣೆ ಸಾಧ್ಯತೆಯನ್ನು ಕ್ಷೀಣಿಸಿತ್ತು. ಮುಂದಿನ ವರ್ಷದ ಕೊಂಡ್ಲಿ ಜಾತ್ರೆ ಹಿನ್ನೆಲೆಯಲ್ಲಿ ಸಿದ್ದಾಪುರ ಉತ್ಸವ ೨೬ ಆಚರಣೆ ಅಸಂಭವ ಎನ್ನುವ ಕಾರಣಕ್ಕೆ ಸಿದ್ಧಾಪುರ ಉತ್ಸವ ಸಮೀತಿ ಈ ವರ್ಷದ ಉತ್ಸವವನ್ನು ಆಯೋಜಿಸಿತು.


ಫೆ.೮-೯ ರ ಎರಡು ದಿವಸಗಳ ಉತ್ಸವಕ್ಕೆ ಅವಶ್ಯ ತಯಾರಿ, ಮುಂಜಾಗ್ರತೆ ವಹಿಸಿದ್ದರೂ ಎಲ್ಲವೂ ಅಂದುಕೊಂಡಂತೆ ನಡೆಯಲಿಲ್ಲ. ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ,ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಉದ್ಯಮಿ ಉಪೇಂದ್ರ ಪೈ ನೇತೃತ್ವದಲ್ಲಿ ಹಲವಾರು ಜನರ ಸಹಕಾರದೊಂದಿಗೆ ನಡೆಯುವ ಈ ಎರಡು ದಿವಸಗಳ ಉತ್ಸವ ಶನಿವಾರ ನಿರೀಕ್ಷೆಯಂತೆ ಅದ್ಧೂರಿ ಚಾಲನೆ ಪಡೆದುಕೊಂಡಿತು.

ಉತ್ಸವ ಉದ್ಘಾಟಿಸಿ ಸಾನಿಧ್ಯ ವಹಿಸಿದ್ದ ಶಿರಳಗಿ ಚೈತನ್ಯ ರಾಜಾರಾಮ ಕ್ಷೇತ್ರದ ಸ್ಮಾಮಿ ಬ್ರಹ್ಮಾನಂದ ಭಾರತಿ ನಲ್ನುಡಿಗಳ ಮೂಲಕ ಉತ್ಸವಕ್ಕೆ ಚಾಲನೆ ನೀಡಿ ಸಾಹಿತ್ಯ,ಸಾಂಸ್ಕೃತಿಕತೆಗಳು ಸಂಸ್ಕೃತಿಯ ಪ್ರತಿಬಿಂಬಗಳು ನಮ್ಮ ಸಂಸ್ಕೃತಿ ನಮ್ಮ ಸಾಹಿತ್ಯ, ಸಮಾವೇಶಗಳ ಮೂಲಕ ಪ್ರಕಟಗೊಳ್ಳಬೇಕು ಎಂದರು.

ಅತಿಥಿಗಳಾಗಿದ್ದ ಯುವ ಧುರೀಣ ಶಶಿಭೂಷಣ ಹೆಗಡೆ, ಉದ್ಯಮಿ ಉಪೇಂದ್ರಪೈ, ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಪ್ರಾಸ್ಥಾವಿಕವಾಗಿ ಮಾತನಾಡಿದ ಕೆ.ಜಿ.ನಾಯ್ಕ ಹಣಜಿಬೈಲ್ ಶಿರಸಿ-ಸಿದ್ದಾಪುರ ಜನರ ಜೊತೆಗೆ ಹೊರ ಜಿಲ್ಲೆಗಳ ಕಲೆ, ಸಾಹಿತ್ಯ, ಸಾಂಸ್ಕೃತಿಕ ವಿನಿಮಯ ಈ ಉತ್ಸವದ ಉದ್ದೇಶ ಎಂದರು.

ಹಿಂದಿನಂತೆ ಈ ವರ್ಷವೂ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಉತ್ಸವದ ವಿಶೇಶ ಆಕರ್ಷಣೆ ಸಂಗೀತ, ನೃತ್ಯ ಜುಗಲ್ಬಂಧಿ ನಡೆಸಿಕೊಟ್ಟ ಸುಬ್ಬು ಇವೆಂಟ್ಸ ನ ಕಲಾವಿದರು ಜನಮನ ಸೂರೆಗೊಂಡರು.

ಮಧ್ಯಾನ್ಹದ ಕ್ರೀಡಾ ಚಟುವಟಿಕೆಗಳು ಸಾಯಂಕಾಲದ ಸ್ಥಳೀಯ ಕಲಾವಿದರ ಹಾಡು ನೃತ್ಯ, ನಡುವೆ ಸಭಾ ಕಾರ್ಯಕ್ರಮ,ರಾತ್ರಿಯ ರಸಮಂಜರಿ ಎಲ್ಲವೂ ಸುಸೂತ್ರವಾಗಿ ಅದ್ಧೂರಿಯಾಗೇ ನಡೆದವು. ನಿರೀಕ್ಷಿತ ಜನಸಮೂಹವಿಲ್ಲದಿದ್ದರೂ ಸೇರಿದ ಜನರು ಸಾಂಸ್ಕೃತಿಕ ರಸದೌತಣ ಉಂಡು ಸಂಬ್ರಮಿಸಿದರು. ಇಂದಿನ ಸಮಾರೋಪ ಸಮಾರಂಭ ಮತ್ತು ಝೇಂಕಾರ್ ಮೆಲೋಡೀಸ್ ನ ರಸಮಂಜರಿ ಬಗ್ಗೆ ಸಾರ್ವಜನಿಕರಿಗೆ ಕುತೂಹಲವಿದೆ.

.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
