

ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆ ಗ್ಯಾರಂಟಿ ಅನುಷ್ಠಾನದಲ್ಲಿ ಮೊದಲ ಸ್ಥಾನದಲ್ಲಿದೆ. ಉತ್ತರಕನ್ನಡದಲ್ಲಿ ಸಿದ್ಧಾಪುರ ಜಿಲ್ಲೆಯ ಮೊದಲ ಸ್ಥಾನಕ್ಕಾಗಿ ಸ್ಫರ್ಧೆಯಲ್ಲಿದೆ. ಈ ಬಗ್ಗೆ ಇಂದು ನಡೆದ ಪಂಚಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನೆ ವೇಳೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮೀತಿ ತಾಲೂಕಾ ಅಧ್ಯಕ್ಷ ಕೆ.ಜಿ. ನಾಗರಾಜ್ ವಿವರ ನೀಡಿದರು.
ಸಭೆಯ ಪ್ರಾರಂಭದಲ್ಲಿ ವಿವರಣೆ ನೀಡದ ಶಿಶು ಅಭಿವೃದ್ಧಿ ಮತ್ತು ಮಹಿಳಾ ಕಲ್ಯಾಣ ಅಧಿಕಾರಿ ತಾಲೂಕಿನ ಸಾಧನೆಯ ವಿವರ ನೀಡಿದರು. ನಂತರ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಯಿತು. ಶಕ್ತಿ ಯೋಜನೆಯ ಮಾಹಿತಿ ನೀಡಿದ ನಿಯಂತ್ರಣಾಧಿಕಾರಿ ಎಂ.ಎನ್. ನಾಯ್ಕ ಸಾರಿಗೆ ಇಲಾಖೆ ಶಕ್ತಿ ಯೋಜನೆಯ ಯಶಸ್ಸಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.
ಇದಕ್ಕಿ ಪ್ರತಿಕ್ರೀಯಿಸಿದ ಅನುಷ್ಠಾನ ಸಮೀತಿ ಹಲಗೇರಿ ಸದಸ್ಯ ರವಿಕುಮಾರ ನಾಯ್ಕ ಸಾರಿಗೆ ಸಂಸ್ಥೆ ವಾಹನಗಳಲ್ಲಿ ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗೆ ನಿರ್ವಾಹಕರು ಉಪೇಕ್ಷೆ ಮಾಡುವುದು,ನಿಂದಿಸುವ ಬಗ್ಗೆ ದೂರು ಹೇಳಿದರು. ಇದಕ್ಕೆ ಪ್ರತಿಕ್ರೀಯಿಸಿದ ನಾಯ್ಕ ಶಿರಸಿ ಡಿಪೋ ಸಿಬ್ಬಂದಿಗಳು ಮಾತು ಕೇಳುತ್ತಾರೆ ಸಾಗರ ಡಿಪೋ ಸಿಬ್ಬಂದಿಗಳು ನಮ್ಮ ಮಾತು ಕೇಳುವುದಿಲ್ಲ ಅವರಿಗೆ ಸಾಗರ ಡಿಪೋ ಕ್ಕೆ ದೂರು ನೀಡಬೇಕು ಎಂದರು.
ಹೊಂದಾಣಿಕೆಯಾಗದ ದಾಖಲೆಗಳು, ಮೃತರ ದಾಖಲಾತಿ ವಿಳಂಬ ಸೇರಿದಂತೆ ಕೆಲವೇ ಕೆಲವು ತಾಂತ್ರಿಕ ಅಡಚಣೆಯ ಪ್ರಕರಣಗಳನ್ನು ಬಿಟ್ಟರೆ ಪ್ರತಿಶತ ೯೮ ರಷ್ಟು ಸಾಧನೆ ಸಿದ್ಧಾಪುರ ತಾಲೂಕಿನ ಪಂಚ ಗ್ಯಾರಂಟಿಗಳಲ್ಲಾಗಿದೆ ಎನ್ನುವ ವಿವರಣೆ ನಡುವೆ ಸಂಬಂಧಿಸಿದ ಅಧಿಕಾರಿಗಳು ತಮ್ ತಮ್ಮ ಇಲಾಖೆಗಳ ಪ್ರಗತಿ ವಿವರಿಸಿದರು.
ರಾಜ್ಯದಲ್ಲಿ ಉತ್ತರ ಕನ್ನಡ ಪಂಚಗ್ಯಾರಂಟಿ ಅನುಷ್ಠಾನದಲ್ಲಿ ಮೊದಲ ಸ್ಥಾನದಲ್ಲಿದೆ, ಸಿದ್ದಾಪುರ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲಸ್ಥಾನಕ್ಕೇರುವ ಹಂತ ತಲುಪಲಿದೆ ಎಂದು ತಾಲೂಕಾ ಪಂಚ ಗ್ಯಾರಂಟಿ ಅನುಷ್ಠಾನ ಸಮೀತಿ ಅಧ್ಯಕ್ಷ ಕೆ.ಜಿ. ನಾಗರಾಜ್ ತಮ್ಮ ಸಂತಸ ಹಂಚಿಕೊಂಡರು.
