



ಸಿದ್ದಾಪುರ .ಪಟ್ಟಣದ ರವೀಂದ್ರನಗರದ ಎಂ. ಎಚ್. ಪಿ .ಎಸ್ ಬಾಲಿಕೊಪ್ಪ ಶಾಲಾ ಆವರಣದಲ್ಲಿ ಆಧಾರ ಸಂಸ್ಥೆ( ರಿ) ಸಿದ್ದಾಪುರ ಆಯೋಜನೆಯಲ್ಲಿ ಮಂಗಳೂರಿನ ಒಮೇಗಾ ಆಸ್ಪತ್ರೆ ಹಾಗೂ ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ಗಳ ಸಂಯುಕ್ತ ಆಶ್ರಯದಲ್ಲಿ ದಿ: ಡಿ. ಎನ್.ಶೇಟ ಸ್ಮರಣಾರ್ಥ ಬೃಹತ್ ಉಚಿತ ಹೃದಯ ತಪಾಸಣಾ ಶಿಬಿರದಲ್ಲಿ 264 ಜನರ ಹೃದಯ ತಪಾಸಣೆ ಮಾಡಲಾಗಿದೆ.
ಶಿಬಿರದಲ್ಲಿ ಮಹಿಳೆಯರ ಸಂಖ್ಯೆ ಎದ್ದು ಕಾಣುತ್ತಿತ್ತು . ಒಟ್ಟು 263 ರಲ್ಲಿ ಪುರುಷರು-115 ಮಹಿಳೆಯರು 148 ಹಾಗೂ 16 ವರ್ಷದ ಒಳಗಿನ 18 ಮಕ್ಕಳು ಭಾಗವಹಿಸಿದ್ದರು.56 ಜನರಿಗೆ ಹೃದಯ ಸಂಬಂಧಿ ತೊಂದರೆ ಇರುವುದು ತಿಳಿದುಬಂದಿದೆ.

ಬೆಳಿಗ್ಗೆ 9:00 ಗಂಟೆಯಿಂದ ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ತಪಾಸಣೆ,ಮಧುಮೇಹ ರಕ್ತ ತಪಾಸಣೆ,ಇ.ಸಿ.ಜಿ ಪರೀಕ್ಷೆ ತಪಾಸಣೆ,ಎಕೋ ತಪಾಸಣೆಯು ಸಾಯಂಕಾಲ 3-30ವರೆಗೆ ನಡೆಯಿತು.
ಈ ಶಿಬಿರದಲ್ಲಿ ಮಂಗಳೂರಿನ ಖ್ಯಾತ ಹೃದಯ ರೋಗ ತಜ್ಞ ಡಾ. ಕೆ. ಮುಕುಂದ, ಶಸ್ತ್ರಚಿಕಿತ್ಸಾ ತಜ್ಞ ಡಾ. ಅಮಿತ ಕಿರಣ್,ಡಾ ಅಭಿಜಿತ್ ಪಾಟೀಲ್,ಮಂಗಳೂರು ಒಮೇಗಾ ಆಸ್ಪತ್ರೆಯ ಎಚ್.ಆರ್.ನಾಗರಾಜ್ ಟಿ,ಇಬ್ರಾಹಿಂ,ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ನ ಬಾಲಕೃಷ್ಣ ಮಟ್ಟು, ಸುದೀಪ ಬಲ್ಯ, ಮುಟ್ಟಂ,ಆಸ್ಪತ್ರೆಯ ಸಿಬ್ಬಂದಿಯರಾದ ಶಿರಸಿಯ ಲತಾ ರಾಧಾಕೃಷ್ಣ ಶೇಟ,ಗಾಯತ್ರಿ ವಿ.ಶೇಟ, ಅರ್ಚನಾ ಮುಲ್ಲೂರ ಸಿದ್ದಾಪುರ, ಪ್ರದೀಪ ತಿರುಮಲೈ, ಹಾಗೂ ಸಿದ್ದಾರೂಢ,ಮತ್ತು ಆಶಾ ಕಾರ್ಯಕರ್ತೆಯರಾದ ಪ್ರಭಾವತಿ ಎಸ್.ಅಂಬಿಗ,ಭಾರತಿ ನಾಯ್ಕ ಈ ಶಿಬಿರಕ್ಕೆ ಸಹಕರಿಸಿದವರು.
…..
ನಾವು ಸಂಘಟಿಸಿದ ಉಚಿತ ಹೃದಯ ತಪಾಸಣ ಶಿಬಿರದಲ್ಲಿ 56 ಜನರಿಗೆ ಹೃದಯ ಸಂಭಂದಿ ತೊಂದರೆ ಇರುವುದು ತಿಳಿದಿದೆ.ಅದರಲ್ಲಿ ಕೆಲವು ಪ್ರಕರಣಗ ಹಳೆಯದಿದೆ.ಕೆಲ ಹೊಸಬರಿಗೂ ಪರೀಕ್ಷೆಯಿಂದ ತಿಳಿದಿದೆ.ಅವರ ಮುಂದಿನ ಚಿಕಿತ್ಸೆಗೆ ಅಗತ್ಯ ಇದ್ದವರಿಗೆ ನಮ್ಮಿಂದ ಹಾಗೂ ಇತರರಿಂದ ಸಹಕಾರ ಮಾಡಿಸಲಾಗುವುದು.-ನಾಗರಾಜ ನಾಯ್ಕ,ಮಾಳ್ಕೊಡ, ಅಧ್ಯಕ್ಷರು,ಆಧಾರ ಸಂಸ್ಥೆ,ಸಿದ್ದಾಪುರ.
…….
ಸಿದ್ದಾಪುರದಲ್ಲಿ ಉಚಿತವಾಗಿ ನಡೆಸಿದ ಹೃದಯ ತಪಾಸಣೆ ಶಿಬಿರ ದಾಖಲೆ ಎನ್ನಬಹುದು. ಉತ್ತಮ ಸಂಘಟನೆ ಆಗಿದೆ.ಇಲ್ಲಿ ಪರೀಕ್ಷೆ ಮಾಡಿಕೊಂಡವರಿಗೆ ಹಾಗೂ ಇತರರಿಗೆ ಮುಂದಿನ ಚಿಕಿತ್ಸೆಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುವುದು.-ಬಾಲಕೃಷ್ಣ ಮಟ್ಟು,, ಪಿ.ಆರ್.ಓ,ಮಂಗಳೂರು ಹಾರ್ಟ್ ಸ್ಕ್ಯಾನ್ ಪೌಂಡೇಶನ್.
