


ರವಿವಾರ ಸಾಯಂಕಾಲ ಆಕಸ್ಮಿಕ ಎನ್ನುವಂತೆ ಸಾರಿಗೆ ಸಂಸ್ಥೆ ಬಸ್ ನಲ್ಲಿ ಚೂರಿ ಇರಿತಕ್ಕೊಳಗಾಗಿ ಮೃತಪಟ್ಟ ಗಂಗಾಧರ ಕೊಲೆ ಹಿಂದೆ ಅವರ ಪತ್ನಿ ಪೂಜಾಳ ಕೈವಾಡವಿದೆಯೆ? ಎನ್ನುವ ಪ್ರಶ್ನೆ ಉದ್ಭವಿಸಿದೆ.
ಮೃತನಾದ ಸಾಗರದ ಗಂಗಾಧರ ಮತ್ತು ಪೂಜಾ ೬ ತಿಂಗಳ ಕೆಳಗೆ ಮದುವೆಯಾಗಿದ್ದರು. ಮದುವೆಯ ನಂತರ ಅನ್ನೊನ್ಯವಾಗಿದ್ದ ಈ ದಂಪತಿಗಳ ನಡುವೆ ಪ್ರೀತಮ ಎನ್ನುವ ಪಾಗಲ್ ಪ್ರೇಮಿ ಎಂಟ್ರಿ ಯಾಗಿದ್ದನೆ? ಎನ್ನುವ ಸಂಶಯ ಕೆಲವರಲ್ಲಿದೆ.
ಪ್ರೀತಮ್ ಪೂಜಾಳ ಅತ್ತೆ ಮನೆ ಅಚನಳ್ಳಿಯ ಕುಟುಂಬದೊಂದಿಗೆ ಸಂಪರ್ಕ, ಸಂಬಂಧ ಹೊಂದಿದ್ದ ವ್ಯಕ್ತಿ ಎನ್ನಲಾಗಿದೆ. ಈ ಪ್ರೀತಮ ಮತ್ತು ಪೂಜಾ ನಡುವೆ ಪ್ರೀತಿ-ಪ್ರೇಮದ ವ್ಯವಹಾರವಿತ್ತೆ? ಎನ್ನುವ ಬಗ್ಗೆ ಗಂಗಾಧರ ಕುಟುಂಬ ಸಂಶಯ ವ್ಯಕ್ತ ಪಡಿಸಿದೆ.
ಫೆ. ೨೨ ರಾತ್ರಿ ಶಿರಸಿಯಿಂದ ಬೆಂಗಳೂರಿಗೆ ತೆರಳಬೇಕಿದ್ದ ಪೂಜಾ ಗಂಗಾಧರ ಜೋಡಿ ಸ್ವಾಭಾವಿಕವಾಗಿ ಹೊಸ ಬಸ್ ನಿಲ್ಧಾಣದಿಂದ ಹಳೆ ಬಸ್ ನಿಲ್ಧಾಣದ ಮಾರ್ಗದಲ್ಲಿ ಬಸ್ ನಿಲ್ಧಾಣದಿಂದ ಹೊರಟಿದ್ದಾರೆ. ಇದೇ ವಾಹನದೊಳಗೆ ನುಸುಳಿಕೊಂಡಿದ್ದ ಶಿರಸಿಯ ಪ್ರೀತಮ್ ಗಂಗಾಧರನೊಂದಿಗೆ ಖ್ಯಾತೆ ತೆಗೆದು ದಿಢೀರನೆ ಚಾಕುವಿನಿಂದ ಗಂಗಾಧರ ಎದೆಗೇ ಚುಚ್ಚಿದ್ದಾನೆ. ತಕ್ಷಣ ಶಿರಸಿಯ ಪಂಡಿತ್ ಸರ್ಕಾರಿ ಆಸ್ಫತ್ರೆಗೆ ಸಾಗಿಸುತ್ತಲೇ ಗಂಗಾಧರ ಕೊನೆ ಉಸಿರೆಳೆದಿದ್ದಾನೆ.
ಪೂಜಾ ಮತ್ತು ಪ್ರೀತಮ್ ನಡುವೆ ವಿವಾಹ ಪೂರ್ವ ಅಥವಾ ವಿವಾಹದ ನಂತರದ ಸಂಬಂಧವಿತ್ತೆ? ಎನ್ನುವ ಸಂಶಯ ಕೆಲವರಲ್ಲಿದೆ. ಗಂಗಾಧರ ಕುಟುಂಬಸ್ಥರೂ ಇದೇ ಸಂಶಯ ಆಧರಿಸಿ ಆಕ್ಷೇಪಿಸಿದ್ದಾರೆ. ಆದರೆ ಪೂಜಾಗೆ ಪರಿಚಿತನಾದ ಪ್ರೀತಮ ಗಂಗಾಧರನನ್ನು ಕೊಲ್ಲಲು ಮತ್ತ್ಯಾ ವುದಾದರೂ ಪ್ರಬಲ ಕಾರಣವಿತ್ತೆ ಎನ್ನುವ ವಿಷಯ ಸ್ಪಷ್ಟವಿಲ್ಲ. ಪೂಜಾ ಹೇಳುವ ಪ್ರಕಾರ ಮದ್ಯಪಾನ ಮಾಡಿದ್ದ ಪ್ರೀತಮ್ ನಶೆಯಲ್ಲಿ ಈ ಕುಕ್ರತ್ಯ ಮಾಡಿರಬಹುದೆ? ಎನ್ನುವುದನ್ನೂ ನಂಬುವುದು ಕಷ್ಟ. ಮದುವೆಯಾಗಿ ಆರು ತಿಂಗಳಲ್ಲಿ ಗಂಡನನ್ನು ಕೊಲೆ ಮಾಡಿದ ಪ್ರೀತಮ್ ಪೂಜಾ ಕಾರಣಕ್ಕೆ ಆಕೆಯ ಗಂಡನ ಹತ್ಯೆ ಮಾಡಿದನೆ? ಎನ್ನುವುದಕ್ಕೆ ಯಾವುದೇ ಪ್ರಬಲ ಸಾಕ್ಷಿಗಳಿಲ್ಲ.
