

ಫೆ.೨೪ ರ ಸೋಮುವಾರ ಸಿದ್ಧಾಪುರದಲ್ಲಿ ಒಂದೇ ದಿನ ನಾಲ್ಕು ಕಡೆ ಅಗ್ನಿ ಅವಗಢಗಳಾಗಿವೆ. ಹೊಸೂರಿನ ತೋಟಗಾರಿಕೆ ಇಲಾಖೆಯ ಪ್ರದೇಶದಲ್ಲಿ ದಿಢೀರನೆ ಕಾಣಿಸಿಕೊಂಡ ಬೆಂಕಿ ಅಗ್ನಿಶಾಮಕ ಇಲಾಖೆಯ ಉದ್ದೇಶಿತ ಕಟ್ಟಣ ನಿರ್ಮಾಣ ಜಾಗವನ್ನೇ ದಹಿಸಿದೆ.
ಮುಂಜಾನೆಯ ಅವಧಿಯಲ್ಲಿ ಅರೆಂದೂರಿನಲ್ಲಿ ಒಣಗಿದ ಕರಡಕ್ಕೆ ಬೆಂಕಿ ಬಿದ್ದು ಅಪಘಾತವಾಗಿದೆ. ನಗರಕ್ಕೆ ಸಮೀಪದ ವಡ್ಡನಗದ್ದೆ ಹಾಗೂ ಅವರಗುಪ್ಪಾ ಗ್ರಾಮಗಳಲ್ಲೂ ಅಗ್ನಿ ಅವಗಢವಾದ ಬಗ್ಗೆ ಸಾರ್ವಜನಿಕರು ತಿಳಿಸಿದ್ದಾರೆ.
ಈ ಬೆಂಕಿ ಅವಗಢಗಳ ಪ್ರದೇಶಕ್ಕೆ ತೆರಳಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಸಂಭಾವ್ಯ ಅಪಘಾತ ತಪ್ಪಿಸಿದ್ದಾರೆ.
ಬೇಡಿಕೆ-ಸಿದ್ಧಾಪುರದಲ್ಲಿ ಕೃಷಿ ಮಾರುಕಟ್ಟೆ ಪ್ರದೇಶದ ಬಾಡಿಗೆ ಕಟ್ಟಡದಲ್ಲಿ ಕೆಲಸಮಾಡುತ್ತಿರುವ ಅಗ್ನಿಶಾಮಕ ಇಲಾಖೆಗೆ ನೀಡಲಾಗಿದ್ದ ವಾಹನಕ್ಕೆ ೧೫ ವರ್ಷ ಮುಗಿದಿರುವುದರಿಂದ ಆ ವಾಹನವನ್ನು ಇಲಾಖೆ ಮರಳಿಸಿದೆ. ಈಗಿರುವ ೫೦೦ ಲೀಟರ್ ಸಾಮರ್ಥ್ಯದ ವಾಹನ ಸಾಧ್ಯತೆ ಕಡಿಮೆ ಇರುವುದರಿಂದ ಹೊಸ ವಾಹನದ ಅನಿವಾರ್ಯತೆ ಇದೆ. ಈಗಿರುವ ಈ ವಾಹನ ನಿಯಮಿತ ಅನುಕೂಲಗಳಿಂದಾಗಿ ತಾಲೂಕಿನ ಬೇಡಿಕೆಗೆ ಸ್ಫಂದಿಸಲು ಕಷ್ಟವಾಗುತ್ತಿದೆ. ಹಾಗಾಗಿ ಇಲಾಖೆ ಅಗತ್ಯ ಅನುಕೂಲಗಳನ್ನು ಕಲ್ಪಸಿಕೊಡಬೇಕೆಂಬ ಬೇಡಿಕೆ ವ್ಯಕ್ತವಾಗಿದೆ.
