


ಸಿದ್ಧಾಪುರ,ಮಾ,೧೪- ಗುರುವಾರ ಸಾಯಂಕಾಲ ಮಳಗಿ ಡ್ಯಾಂ ನಲ್ಲಿ ಮುಳುಗಿ ಮೃತರಾದ ಸಿದ್ಧಾಪುರ ರವೀಂದ್ರನಗರದ ಶ್ಯಾಮಸನ್ ಫರ್ನಾಂಡೀಸ್ ಕಳೆ ಬರಹ ಇನ್ನೂ ಸಿದ್ಧಾಪುರ ತಲುಪಿಲ್ಲ.
ಗುರುವಾರ ಸಾಯಂಕಾಲ ಶಿರಸಿಯಿಂದ ಮುಂಡಗೋಡು ಮಳಗಿ ಜಲಾಶಯಕ್ಕೆ ಮೀನು ಹಿಡಿಯಲು ಹೋಗಿದ್ದ ಶ್ಯಾಮಸನ್ ಆಕಸ್ಮಿಕವಾಗಿ ಕಾಲುಜಾರಿ ಮೃತಪಟ್ಟಿದ್ದರು. ಇಬ್ಬರು ಸಂಬಂಧಿಗಳೊಟ್ಟಿಗೆ ಧರ್ಮಾ ಜಲಾಶಯಕ್ಕೆ ತೆರಳಿದ್ದ ಶ್ಯಾಮಸನ್ ನೀರಿನಲ್ಲಿ ಮುಳುಗಿದ್ದರು. ನಂತರ ಕಾರ್ಯಾಚರಣೆಯ ಮೂಲಕ ಹೊರತೆಗೆದಾಗ ಸಾವನ್ನಪ್ಪಿದ್ದು ಖಚಿತಪಟ್ಟಿತ್ತು. ಅವರ ಶವಸಂಸ್ಕಾರ ಶನಿವಾರ ಬೆಳಿಗ್ಗೆ ನಡೆಯಲಿದ್ದು ಪರ ಊರುಗಳಲ್ಲಿರುವ ಸಂಬಂಧಿಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.
ಮೃತ ಶ್ಯಾಮಸನ್ ಪತ್ನಿ, ಮಗಳು, ಪಾಲಕರು ಸಂಬಂಧಿಗಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಶಿರಸಿಯ ಹೋಳಿ ಬೇಡರವೇಷ ನೋಡಲು ಸಿದ್ಧಾಪುರದಿಂದ ತೆರಳಿದ್ದ ಅವರು ಶಿರಸಿಯಿಂದ ಸ್ನೇಹಿತರ ಜೊತೆಗೆ ಮಳಗಿ ಧರ್ಮಾ ಜಲಾಶಯಕ್ಕೆ ಮೀನು ಹಿಡಿಯಲು ತೆರಳಿದ್ದಾಗ ಈ ಅವಗಢ ಸಂಭವಿಸಿದೆ.
