


ಶಿರಸಿಯ ಹಿರಿಯ ಪತ್ರಕರ್ತ ವಿಶ್ವಾಮಿತ್ರ ಹೆಗಡೆ ಭತ್ತಗುತ್ತಿಗೆ ಇಂದು ವಿಧಿವಶರಾಗಿದ್ದಾರೆ. ಪ್ರತಿಷ್ಠಿತ ಭತ್ತಗುತ್ತಿಗೆ ಕುಟುಂಬದ ವಿಶ್ವಾಮಿತ್ರ ಹೆಗಡೆ ಕನ್ನಡಪ್ರಭ,ವಿಶ್ವವಾಣಿ ಸೇರಿದಂತೆ ಕೆಲವು ಪತ್ರಿಕೆಗಳಲ್ಲಿ ಕೆಲಸಮಾಡಿದ್ದರು. ಸಂಘದ ಹಿನ್ನೆಲೆಯ ವಿಶ್ವಾಮಿತ್ರ ಹೆಗಡೆ ಮಾನವೀಯ ಗುಣಗಳು, ನೇರ, ನಿಷ್ಠುರ ನಡೆಗಳಿಂದ ಹೆಸರಾಗಿದ್ದರು. ಪತ್ನಿ, ಸಹೋದರರು ಸೇರಿದಂತೆ ಅಪಾರ ಬಂಧುಬಳಗ ಅಗಲಿದ ಅವರ ಅಂತ್ಯಕ್ರೀಯೆ ಗುರುವಾರ ಶಿರಸಿಯಲ್ಲಿ ನಡೆಯಲಿದೆ ಎನ್ನಲಾಗಿದೆ.
ಶಿರಸಿಯ ನೂತನ ಟ್ರಾಫಿಕ್ ಠಾಣೆಯ ಉದ್ಘಾ ಟನೆ ಇಂದು ನಡೆಯಿತು. ಗೃಹಸಚಿವ ಜಿ. ಪರಮೇಶ್ವರ ಕಾರವಾರದಿಂದಲೇ ಡಿಜಿಟಲ್ ವ್ಯವಸ್ಥೆ ಮೂಲಕ ಠಾಣೆ ಉದ್ಘಾಟಿಸಿ ಶುಭಕೋರಿದರು.
ದೀರ್ಘ ಅನಾರೋಗ್ಯದಿಂದ ರವಿವಾರ ನಿಧನರಾದ ಸಿ.ಆರ್.ಫಿ.ಎಫ್. ಯೋಧ ಸುರೇಶ್ ನಾಯ್ಕ ಹಳದೋಟರ ಅಂತ್ಯಕ್ರೀಯೆ ಮಂಗಳವಾರ ನಡೆಯಿತು. ಸುಧೀರ್ಘ ೩೯ ವರ್ಷಗಳ ಕಾಲ ಸೇವೆ ಸಲ್ಲಿಸಿದ ಸುರೇಶ ನಾಯ್ಕರ ಅಂತ್ಯವಿಧಿಯ ವೇಳೆ ಸೇನಾ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.
ವೈಶಿಷ್ಟ್ಯಪೂರ್ಣ ಜಡ್ಡಿ ಹಬ್ಬ ಸಿದ್ಧಾಪುರ ಶಂಕರಮಠದಲ್ಲಿ ನಡೆಯಿತು. ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಿದ ಈ ಕಾರ್ಯಕ್ರಮದ ವೇಳೆ ಅನೇಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಅರಣ್ಯ ಇಲಾಖೆ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ಹಾರ್ನಬಿಲ್ ಫೆಸ್ಟಿವಲ್ ಮಾದರಿಯಲ್ಲಿ ಮಾಡುವ ಅವಕಾಶವನ್ನು ಅರಣ್ಯ ಇಲಾಖೆ ಕಳೆದುಕೊಂಡಂತೆನಿಸಿತು.
