

ಮುಸ್ಲಿಂ ಅಲ್ಪಸಂಖ್ಯಾತರನ್ನು ಒಲೈಸುವಲ್ಲಿ ಬಿ.ಜೆ.ಪಿ. ಮತ್ತು ಕಾಂಗ್ರೆಸ್ ಗಳು ಸ್ಫರ್ಧೆ ನಡೆಸಿದ್ದು ಅಪಾಯಕಾರಿ ನಡೆಗಳಲ್ಲಿ ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಿಂತಿವೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ಯುಗಾದಿ ನಿಮಿತ್ತ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಮುತಾಲಿಕ್ ಶಿರಸಿ,ಸಿದ್ಧಾಪುರಗಳಲ್ಲಿ ಖಾಸಗಿ ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ ಪಾಲ್ಗೊಂಡು ಮಾತನಾಡಿ ಬಸವರಾಜ್ ಪಾಟೀಲ್ ಯತ್ನಾಳ್ ಸೇರಿದಂತೆ ಅನೇಕ ಕಟ್ಟರ್ ಹಿಂದೂ ಪ್ರತಿಪಾದಕರನ್ನು ಬಿ.ಜೆ.ಪಿ. ಮುಗಿಸಿದೆ. ಕಾಂಗ್ರೆಸ್ ಬಸ್ಮಾಸುರ ಎಂದರೆ.. ಬಿ.ಜೆ.ಪಿ. ಬಕಾಸುರನಾಗಿ ಬೆಳೆಯುತ್ತಿದೆ. ಹಿಂದೂ, ಹಿಂದುತ್ವಕ್ಕಾಗಿ ಹೊಸ ಪಕ್ಷ ಕಟ್ಟುವುದಕ್ಕಿಂತ ದಾರಿ ತಪ್ಪುತ್ತಿರುವ ಬಿ.ಜೆ.ಪಿ. ದುರಸ್ತಿ ಮಾಡುವುದೇ ಒಳ್ಳೆಯದು ಎಂದು ಅಭಿಪ್ರಾಯ ಪಟ್ಟರು.
