


ಸಿದ್ದಾಪುರದಲ್ಲಿ ಪವಿತ್ರ ರಂಜಾನ್ ಸಂಭ್ರಮಾಚರಣೆ
ಸಿದ್ದಾಪುರ :31
ಒಂದು ತಿಂಗಳ ಕಾಲ ಉಪವಾಸ ವ್ರತವನ್ನು ಆಚರಿಸಿದ ಮುಸ್ಲಿಮ್ ಬಾಂಧವರು ಪವಿತ್ರ ರಂಜಾನ್ (ಈದ್ ಉಲ್ ಫಿತ್ರ )ಹಬ್ಬವನ್ನು ಶೃದ್ಧಾ ಭಕ್ತಿಯೊಂದಿಗೆ ಸಡಗರ ಸಂಭ್ರಮದಿಂದ ಆಚರಿಸಿದರು. ಪಟ್ಟಣದ ಈದ್ಗ ಮೈದಾನದಲ್ಲಿ ಸೇರಿದ ಮುಸ್ಲಿಂ ರು ಹಬ್ಬದ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರವಚನ ನೀಡಿ ಮಾತನಾಡಿದ ಧರ್ಮಗುರುಗಳಾದ ಮಹಮೂದ್ ರಜಾ ಬಹಿರಂಗ ಶುದ್ಧಿ ಜೊತೆಗೆ ಅಂತರಂಗ ಶುದ್ಧಿ ಮಹತ್ವ ದ್ದಾಗಿದೆ.

ರಂಜಾನ್ ಪವಿತ್ರ ಮಾಸದಲ್ಲಿ ಈ ಎರಡು ಕ್ರಿಯೆಗಳ ಪಾಲನೆ ಆಗಿದೆ. ಇದೇ ಶುದ್ಧಿಯನ್ನು ವರ್ಷಪೂರ್ತಿ ಆಚರಣೆಗೆ ತರುವಂತೆ ನೆರೆದಿದ್ದ ಜನಸ್ತೋಮಕ್ಕೆ ಕರೆನೀಡಿದರು ಮಸೀದಿ ಕಮಿಟಿ ಅಧ್ಯಕ್ಷರಾದ ಖಾದರ್ ಭಾಷಾ ಹೊಸೂರ್ ಎಲ್ಲರಿಗೂ ಹಬ್ಬದ ಶುಭಾಶಯ ಕೋರಿದರು. ಪ. ಪಂ ಮಾಜಿ ಸ ದಸ್ಯ ಮುನವ್ವರ್ ಗುರ್ಕಾರ್ ಮಸೀದಿ ಮದ್ರಸಾ ಏಳ್ಗೆ ಕುರಿತು ಮಾತನಾಡಿದರು. ಇಸ್ತಿಖಾಫ್ ನಲ್ಲಿ ಭಾಗವಹಿಸಿದವರನ್ನು ಹಜ್ ಯಾತ್ರೆಗೆ ಹೋಗುವವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ನಂತರ ದರ್ಗಕ್ಕೆ ತೆರಳಿ ವಿಶ್ವಶಾಂತಿಗಾಗಿ ಮುಸ್ಲಿಮ್ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಿಯಾಜ್ ಹೊಸೂರು ಸದಸ್ಯ ಇಲಿಯಾಸ್ ಇಬ್ರಾಹಿಂ ಸಾಬ್ ಸ್ಯೆಯದ್ ಮುಷೀರ್ ಫಯಾಜ್ ಅಹ್ಮದ್ ಇದ್ರೂಸ್ ಬಿ. ಎ. ಸಾಬ್ ಮತ್ತಿತರರು ಉಪಸ್ಥಿತರಿದ್ದರು.
.
