

ಮಲೆನಾಡು ಕರಾವಳಿಯ ಅಕಾಲಿಕ ಮಳೆ ಬೇಸಿಗೆಯ ಉಷ್ಣವನ್ನು ಶಮನ ಮಾಡಿದ್ದರೆ… ಪೂರ್ವನಿಶ್ಚಿತ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ಹಲವು ಕಡೆ ಅವಾಂತರಗಳಾಗಿದ್ದು ಜಿಲ್ಲೆಯ ಬೇಡ್ಕಣಿಯ ಶನೇಶ್ವರ ದೇವರ ವಾರ್ಷಿಕೋತ್ಸವ, ಅವರಗುಪ್ಪಾದ ೯ ವರ್ಷಗಳ ನಂತರದ ಜಾತ್ರೆ, ಹೊಸೂರಿನ ಕುಸ್ತಿ ಪಂದ್ಯಾವಳಿಗೆ ಅಡ್ಡಿ ಮಾಡಿದೆ. ( ಈ ಕುರಿತ ವೀಡಿಯೋಗಳು samaajamukhi ಯೂಟ್ಯೂಬ್ ಚಾನೆಲ್ ನಲ್ಲಿವೆ.
ಶಾಸಕರ ಮಿಂಚಿನ ಸಂಚಾರ…. ಉತ್ತರ ಕನ್ನಡ ಜಿಲ್ಲೆಯ ೬ ಶಾಸಕರಲ್ಲಿ ತಮ್ಮ ಓಡಾಟದಿಂದ ಹೆಸರು ಮಾಡುತ್ತಿರುವ ಶಿರಸಿ ಶಾಸಕ ಭೀಮಣ್ಣ ನಾಯ್ಕ ಕಾಲಿಗೆ ಚಕ್ರ ಸುತ್ತಿಕೊಂಡಂತೆ ಕ್ಷೇತ್ರ ಪರ್ಯಟನೆ ಮಾಡುತಿದ್ದಾರೆ. ಜಾತಿ-ಧರ್ಮ ಬೇಧವಿಲ್ಲದೆ ಶಿರಸಿ ಕ್ಷೇತ್ರದ ೨ ತಾಲೂಕುಗಳನ್ನು ಭೇಟಿ ಮಾಡುತ್ತಿರುವ ಶಾಸಕ ಭೀಮಣ್ಣ ಹಬ್ಬ-ಜಾತ್ರೆ ಸಮಾರಾಧನೆ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ ಜನರಿಗೆ ಹತ್ತಿರವಾಗುತಿದ್ದಾರೆ.

ಕಳೆದ ಆರ್ಥಿಕ ವರ್ಷದಲ್ಲಿ ಶಿರಸಿ ಕ್ಷೇತ್ರಕ್ಕೆ ನೂರಕ್ಕೂ ಹೆಚ್ಚು ಕೋಟಿ ಅನುದಾನ ತಂದಿರುವ ಭೀಮಣ್ಣ ನಾಯ್ಕ ಈ ಆರ್ಥಿಕ ವರ್ಷದಲ್ಲಿ ತಮ್ಮ ಕೆಲಸದ ವೇಗ ಹೆಚ್ಚಿಸಿಕೊಳ್ಳುತಿದ್ದಾರೆ. ಜನರ ಅಗತ್ಯಕ್ಕೆ ಅನಿವಾರ್ಯತೆಗೆ ಸ್ಫಂದಿಸುತ್ತಿರುವ ಶಾಸಕರು ಜನರ ಬಹುದಿನಗಳ ಬೇಡಿಕೆಯ ಅಗತ್ಯ ಕೆಲಸಗಳು, ಅನಿವಾರ್ಯ ಕಾಮಗಾರಿಗಳಿಗೆ ಆದ್ಯತೆ ಮೇರೆಗೆ ಅನುದಾನ ನೀಡುತ್ತಿರುವುದು ಸ್ಥಳೀಯರ ಖುಷಿಗೆ ಕಾರಣವಾಗಿದೆ. ಕಳೆದ ಮೂವತ್ತು ವರ್ಷಗಳಿಂದ ಶಾಸಕರು, ಸಂಸದರ ಒಣ ಭಾಷಣಗಳಿಂದ ಬೇಸರಗೊಂಡಿದ್ದ ಜನತೆಗೆ ವೈಯಕ್ತಿಕ ನೆರವು ನೀಡುತ್ತಿರುವ ಭೀಮಣ್ಣ ತಮ್ಮ ವೈಯಕ್ತಿಕ ವರ್ಚಸ್ಸಿನ ವೇಗಕ್ಕೂ ಕಾರಣರಾಗುತಿದ್ದಾರೆ. ಶಿರಸಿ-ಸಿದ್ಧಾಪುರ ಕ್ಷೇತ್ರದಲ್ಲೀಗ ಧರ್ಮಭೇದದ ಕೋಮುವಾದಿ ಭಾಷಣಕ್ಕಿಂತ ಜನರ ನೆರವಿಗೆ ನಿಲ್ಲುತ್ತಿರುವ ಭೀಮಬಲ ಬೇಕು ಎನ್ನುವ ಅಭಿಪ್ರಾಯ ಜನಜನಿತವಾಗುತ್ತಿದೆ.

